ಉಗ್ರ ಸಂಘಟನೆ ಜೊತೆ ಲಿಂಕ್ ಹೊಂದಿದ್ದ ಶಂಕಿತರು ಅರೆಸ್ಟ್​

masthmagaa.com:

ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಶಂಕೆಯ ಮೇರೆಗೆ 6 ಜನರನ್ನ ಅಸ್ಸಾಂನ ಬರ್‌ಪೇಟದಲ್ಲಿ ಆರೆಸ್ಟ್‌ ಮಾಡಲಾಗಿದೆ. ಈ 6 ಜನ ಶಂಕಿತರು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪು ಅನ್ಸಾರುಲ್ ಇಸ್ಲಾಂನೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಅನ್ಸಾರುಲ್ ಇಸ್ಲಾಂ ಇತರೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ. ಹಾಗಾಗಿ ಈ 6 ಜನರನ್ನ ಆರೆಸ್ಟ್‌ ಮಾಡಲಾಗಿದ್ದು ಇವರೆಲ್ಲ 28 ರಿಂದ 45 ವರ್ಷ ವಯಸ್ಸಿನ ಒಳಗಿನವರು ಅಂತ ಮಾಹಿತಿ ಲಭ್ಯವಾಗಿದೆ. ಹಾಗೆ ಬಂಧಿತರಿಂದ 15 ಮೊಬೈಲ್‌ 20 ಸಿಮ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

-masthmagaa.com

Contact Us for Advertisement

Leave a Reply