ಮಕ್ಕಳು ಹೇಗೆ ಕೊರೋನಾ ಎದುರಿಸಬೇಕು..? ಗೈಡ್​ಲೈನ್ಸ್ ಬಿಡುಗಡೆ

masthmagaa.com:

ಕೊರೋನಾ ಮೂರನೇ ಅಲೆ ಬಂದ್ರೆ ಅದು ಮಕ್ಕಳನ್ನೆ ಹೆಚ್ಚು ಟಾರ್ಗೆಟ್ ಮಾಡುತ್ತೆ ಅಂತೆಲ್ಲಾ ಹೇಳಲಾಗ್ತಿದೆ. ಆದ್ರೆ ಹಾಗೇ ಆಗುತ್ತೆ ಅಂತ ಈಗಲೇ ಹೇಳಕ್ಕಾಗಲ್ಲ ಅನ್ನೋದು ಮತ್ತೊಂದು ವಾದ. ಇದರ ನಡುವೆಯೇ 18 ವರ್ಷದೊಳಗಿನ ಮಕ್ಕಳಲ್ಲಿ ಕೊರೋನಾವನ್ನ ಹೇಗೆ ನಿರ್ವಹಣೆ ಮಾಡಬೇಕು ಅನ್ನೋದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಇಲಾಖೆ ಕೆಳಗೆ ಬರೋ ಡೈರಕ್ಟರೇಟ್​ ಜನರಲ್ ಆಫ್ ಹೆಲ್ತ್​ ಸರ್ವಿಸಸ್ (ಡಿಜಿಹೆಚ್​ಎಸ್​) ಗೈಡ್​ಲೈನ್ಸ್ ರಿಲೀಸ್ ಮಾಡಿದೆ. ಇದರಲ್ಲಿ ಮಕ್ಕಳಲ್ಲಿ ಕೊರೋನಾ ನಿರ್ವಹಣೆಗೆ ರೆಮ್ಡೆಸಿವಿರ್ ಔಷಧಿಯನ್ನ ಬಳಸಬಾರದು ಅಂತ ಸೂಚಿಸಲಾಗಿದೆ. ರೋಗದ ಲಕ್ಷಣ ಇಲ್ಲದೇ ಇರೋ ಮತ್ತು ಮಧ್ಯಮ ಪ್ರಮಾಣದ ಪ್ರಕರಣಗಳಿಗೆ ಚಿಕಿತ್ಸ ನೀಡಲು ಸ್ಟಿರಾಯ್ಡ್​ಗಳನ್ನ ಬಳಸಿದ್ರೆ ಸಮಸ್ಯೆ ಆಗಬಹುದು. ಇನ್ನು ಮಕ್ಕಳ ಶ್ವಾಸಕೋಶದ ಮೇಲೆ ಕೊರೋನಾ ಯಾವ ರೀತಿಯ ಪರಿಣಾಮ ಬೀರಿದೆ ಅನ್ನೋದನ್ನ ತಿಳಿಯಲು HRCT ಇಮೇಜಿಂಗ್ ಅಥವಾ ಸಿಟಿ ಸ್ಕ್ಯಾನ್​ನ ತರ್ಕಬದ್ಧ ಬಳಕೆಗೆ ಸೂಚಿಸಲಾಗಿದೆ. ಇನ್ನು 5 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸೋ ಅಗತ್ಯವಿಲ್ಲ, 6 ರಿಂದ 11 ವರ್ಷದ ಮಕ್ಕಳು ಪ್ರಾಪರ್ ಆಗಿ ಮಾಸ್ಕ್​ ಧರಿಸಲು ಶಕ್ತರಾಗಿದ್ರೆ ಅಂಥವರು ಪೋಷಕರು ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಸ್ಕ್ ಧರಿಸಬಹುದು. 12 ವರ್ಷ ಮೇಲ್ಪಟ್ಟ ಮಕ್ಕಳು ವಯಸ್ಕರಂತೆ ಮಾಸ್ಕ್ ಧರಿಸಬಬೇಕು.

-masthmagaa.com

Contact Us for Advertisement

Leave a Reply