ರಾಜ್ಯದಲ್ಲಿ ಮತ್ತೆ 63 ಜನರಿಗೆ ಕೊರೋನಾ.. ಉಡುಪಿ ರೆಡ್​ ಜೋನ್..!

masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನದವರೆಗೆ 63 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,458ಕ್ಕೆ ಏರಿಕೆಯಾಗಿದೆ. ಇದುವರೆಗೆ 40 ಮಂದಿ ಮೃತಪಟ್ಟಿದ್ದಾರೆ.

ಹೊಸದಾಗಿ ಪತ್ತೆಯಾದ 63 ಪ್ರಕರಣಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ 21 ಪ್ರಕರಣಗಳು ದೃಢಪಟ್ಟಿವೆ. ಬೀದರ್​ನಲ್ಲಿ 10, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7, ಉಡುಪಿಯಲ್ಲಿ 6, ಬೆಂಗಳೂರು ನಗರ ಮತ್ತು ತುಮಕೂರಿನಲ್ಲಿ ತಲಾ 4, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಯಾದಗಿರಿಯಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿದೆ.

ಆರೆಂಜ್ ಜೋನ್​ನಲ್ಲಿದ್ದ ಉಡುಪಿ ಜಿಲ್ಲೆ ಈಗ ಒಟ್ಟು 21 ಪ್ರಕರಣಗಳೊಂದಿಗೆ ರೆಡ್​ ಜೋನ್​ಗೆ ಹೋಗಿದೆ. ರಾಜ್ಯದಲ್ಲಿ ಸದ್ಯ 14 ಜಿಲ್ಲೆಗಳು ರೆಡ್​ ಜೋನ್​, 13 ಜಿಲ್ಲೆಗಳು ಆರೆಂಜ್​ ಹಾಗೂ 3 ಜಿಲ್ಲೆಗಳು ಗ್ರೀನ್ ಜೋನ್​ನಲ್ಲಿವೆ.

ರೆಡ್​ ಜೋನ್​ ಜಿಲ್ಲೆಗಳು:

1. ಬೀದರ್

2. ಕಲಬುರಗಿ

3. ವಿಜಯಪುರ

4. ಬಾಗಲಕೋಟೆ

5. ಬೆಳಗಾವಿ

6. ಧಾರವಾಡ

7. ಉತ್ತರ ಕನ್ನಡ

8. ಶಿವಮೊಗ್ಗ

9. ದಾವಣಗೆರೆ

10. ಉಡುಪಿ

11. ದಕ್ಷಿಣ ಕನ್ನಡ

12. ಹಾಸನ

13. ಮಂಡ್ಯ

14. ಬೆಂಗಳೂರು ನಗರ

 

ಆರೆಂಜ್​ ಜೋನ್​ ಜಿಲ್ಲೆಗಳು: 

1. ಮೈಸೂರು

2. ಕೊಡಗು

3. ಚಿಕ್ಕಮಗಳೂರು

4. ಕೋಲಾರ

5. ಚಿಕ್ಕಬಳ್ಳಾಪುರ

6. ತುಮಕೂರು

7. ಚಿತ್ರದುರ್ಗ

8. ಬಳ್ಳಾರಿ

9. ಹಾವೇರಿ

10. ಗದಗ

11. ಕೊಪ್ಪಳ

12. ರಾಯಚೂರು

13. ಯಾದಗಿರಿ

 

ಗ್ರೀನ್ ಜೋನ್​ ಜಿಲ್ಲೆಗಳು: 

1. ರಾಮನಗರ

2. ಚಾಮರಾಜನಗರ

3. ಬೆಂಗಳೂರು ಗ್ರಾಮಾಂತರ

-masthmagaa.com

Contact Us for Advertisement

Leave a Reply