ಗಡಿಯಲ್ಲಿ ಹೊಸದಾಗಿ 6,400 ರಾಕೆಟ್‌ ನಿಯೋಜನೆಗೆ ಕೇಂದ್ರ ಅಸ್ತು!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಬರೋಬ್ಬರಿ 2,800 ಕೋಟಿ ವೆಚ್ಚದಲ್ಲಿ 6,400 ರಾಕೆಟ್‌ಗಳನ್ನು ಸಂಗ್ರಹಣೆ ಮಾಡೋಕೆ ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ನಿಯೋಜನೆಗೊಂಡಿರೋ ಪಿನಕ ವೆಪನ್‌ ಸಿಸ್ಟಮ್‌ಗಳಿಗೆ ಬೇಕಾಗೊ ಹೆಚ್ಚುವರಿ ರಾಕೆಟ್‌ಗಳ ಸಂಗ್ರಹಣೆಗೆ ಸಚಿವಾಲಯ ಅಪ್ರೂವಲ್‌ ನೀಡಿದೆ. ತನ್ನ ವೇಗವಾಗಿ ರಿಯಾಕ್ಟ್‌ ಮಾಡೋ ಸಾಮರ್ಥ್ಯದಿಂದ ಅಂತ್ಯಂತ ಕಡಿಮೆ ಅವಧಿಯಲ್ಲಿ ಗುತಿ ತಲುಪೋ ಎಬಿಲಿಟಿ ಈ ವೆಪನ್‌ ಸಿಸ್ಟಮ್‌ಗೆ ಇದೆ. Area Denial Munition Type 2 ಹಾಗೂ Type-3 ರಾಕೆಟ್‌ಗಳನ್ನ ಇಂಡಿಯನ್‌ ಆರ್ಮಿಗೆ ಸೇರಿಸೋಕೆ ಸಚಿವಾಲಯ ಪ್ಲಾನ್‌ ಮಾಡಿದೆ. ಎಲ್ಲಾ ತರದ ವಾತಾವರಣದಲ್ಲೂ ಬಳಕೆಗೆ ಬರೋ ಈ ಮಲ್ಟಿ ಬ್ಯಾರೆಲ್‌ ರಾಕೆಟ್‌ ಲಾಂಚರ್‌ ಅಥ್ವಾ MRL ಗಳನ್ನ ಕಂಪ್ಲೀಟಾಗಿ ದೇಶೀಯವಾಗಿ ಉತ್ಪಾದನೆ ಮಾಡಲಾಗತ್ತೆ. ಟಾಟಾ ಡಿಫೆನ್ಸ್‌ ಮತ್ತು ಎಕಾನಾಮಿಕ್‌ ಎಕ್ಸ್‌ಪ್ಲೋಸಿವ್ಸ್‌ ಲಿಮಿಟೆಡ್‌ ಹಾಗೂ ಲಾರ್ಸನ್‌ ಅಂಡ್‌ ಟೂಬ್ರೋ ಕಂಪನಿಗಳು ಈ ರಾಕೆಟ್‌ಗಳನ್ನ ಉತ್ಪಾದಿಸಲಿವೆ.

-masthmagaa.com

Contact Us for Advertisement

Leave a Reply