ಅಬುಧಾಬಿ ಮಂದಿರದಲ್ಲಿ ಮೊದಲ ದಿನವೇ 65 ಸಾವಿರ ಭಕ್ತರ ದರ್ಶನ!

masthmagaa.com:

UAE ನಲ್ಲಿ ಉದ್ಘಾಟನೆಯಾದ ಮೊದಲ ಹಿಂದೂ ದೇವಾಲಯ, BAPS ಮಂದಿರಕ್ಕೆ ದಾಖಲೆಯ ಪ್ರಮಾಣದಲ್ಲಿ ಭಕ್ತರು ಆಗಮಿಸ್ತಿದ್ದಾರೆ. ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿದ ಮೊದಲ ದಿನ ಅಂದ್ರೆ ಮಾರ್ಚ್‌ 3 ರಂದು ಬರೋಬ್ಬರಿ 65 ಸಾವಿರ ಭಕ್ತಾಧಿಗಳು ಮಂದಿರಕ್ಕೆ ಭೇಟಿ ನೀಡಿದ್ದಾರೆ. ಅಲ್ದೇ ವಾರಾಂತ್ಯಗಳಲ್ಲಿ ಅಬುಧಾಬಿಯಿಂದ ಈ ಮಂದಿರಕ್ಕೆ ಭಕ್ತಾಧಿಗಳಿಗಾಗಿ ಹೊಸ ಬಸ್‌ಗಳ ವ್ಯವಸ್ಥೆಯನ್ನ UAE ಸರ್ಕಾರ ಮಾಡಿದೆ ಅಂತ ಗೊತ್ತಾಗಿದೆ. ಅಂದ್ಹಾಗೆ ಫೆಬ್ರವರಿ 14 ರಂದು ಪ್ರಧಾನಿ ಮೋದಿ ಅವ್ರು ಉದ್ಘಾಟಿಸಿದ್ದ ಈ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿದ ಮೊದಲ ದಿನವೇ ದಾಖಲೆಯ ಪ್ರಮಾಣದ ಭಕ್ತರು ದರ್ಶನ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply