ಇಂಡೋನೇಷ್ಯಾದ ಸಮುದ್ರದಲ್ಲಿ ಪ್ರಬಲ ಭೂಕಂಪ!

masthmagaa.com:
ಇಂಡೋನೇಷ್ಯಾದ ಸಮುದ್ರದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಇದ್ರಿಂದ ದೊಡ್ಡ ಮಟ್ಟದ ಸುನಾಮಿ ಏಳಬಹುದು ಅಂತ ಅಮೆರಿಕದ ಜಿಯೋಲಾಜಿಕಲ್ ಸರ್ವೇ ಎಚ್ಚರಿಕೆ ನೀಡಿದ್ದಾರೆ. ಮೌಮೆರೆ ನಗರದಿಂದ ನೂರು ಕಿಲೋಮೀಟರ್ ದೂರದಲ್ಲಿ, ಸಮುದ್ರದ 18.5 ಕಿಲೋಮೀಟರ್ ಆಳದಲ್ಲಿ ಸುನಾಮಿ ಎದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಇಂಡೋನೇಷ್ಯಾ 27 ಕೋಟಿ ಜನಸಂಖ್ಯೆ ಇರೋ ದ್ವೀಪರಾಷ್ಟ್ರವಾಗಿದ್ದು, ಇಲ್ಲಿ ಯಾವಾಗಲೂ ಭೂಕಂಪ, ಜ್ವಾಲಾಮುಖಿ ಸ್ಫೋಟದ ಅಪಾಯ ಇರುತ್ತೆ.
-masthmagaa.com

Contact Us for Advertisement

Leave a Reply