ಪಶ್ಚಿಮ ಬಂಗಾಳ: ಅಡೆನೊವೈರಸ್‌ಗೆ 7 ಮಕ್ಕಳು ಬಲಿ

masthmagaa.com:

ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಯಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕಿನಿಂದ 7 ಮಕ್ಕಳು ಸಾವನ್ನಪ್ಪಿದ್ದಾರೆ. ಎಲ್ಲಾ ಮಕ್ಕಳು ಉಸಿರಾಟದ ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ಇದಕ್ಕೆ ಅಡೆನೊವೈರಸ್‌ ಕಾರಣಾನಾ ಇಲ್ವಾ ಅನ್ನೋದನ್ನ ಕನ್ಫಮ್‌ ಮಾಡೋಕೆ ನಾವು ಇನ್ನೂ ಪರೀಕ್ಷೆ ಮಾಡ್ತಿದ್ದೀವಿ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಇಲ್ಲಿಯವರೆಗೆ ಅಡೆನೊವೈರಸ್‌ನಿಂದ 12 ಮಕ್ಕಳು ಮೃತಪಟ್ಟಿದ್ದಾರೆ ಅಂತ ಅಲ್ಲಿನ ಸರ್ಕಾರ ಹೇಳಿದೆ. ಅಂದ್ಹಾಗೆ ಈ ವೈರಸ್‌ ಒಬ್ರಿಂದ ಒಬ್ರಿಗೆ ಗಾಳಿ ಮೂಲಕ ಹಾಗೂ ಕೆಮ್ಮು , ಸೀನುವಿಕೆಯಿಂದ ಹರಡುತ್ತೆ. ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಈ ಸೋಂಕು ತಗುಲಿರೋದು ಕಂಡು ಬಂದಿದೆ. ಈ ರೋಗದ ಲಕ್ಷಣಗಳೆಂದ್ರೆ, ಶೀತ ಜ್ವರ, ಗಂಟಲು ನೋವು, ಗಂಟಲು ಊತ, ನ್ಯುಮೋನಿಯಾ. ಪ್ರಸ್ತುತ ಅಡೆನೊವೈರಸ್‌ಗೆ ಯಾವುದೇ ಆಂಟಿ-ವೈರಲ್ ಔಷಧಗಳು ಲಭ್ಯವಿಲ್ಲ.

-masthmagaa.com

Contact Us for Advertisement

Leave a Reply