ಪಾಕ್​​ನಲ್ಲಿ ಈ ವರ್ಷ ನ್ಯುಮೋನಿಯಾಗೆ ಬಲಿಯಾಗಿದ್ದು ಎಷ್ಟು ಜನ?

masthmagaa.com:

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕಳೆದೊಂದು ವರ್ಷದಲ್ಲಿ 8,534 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಶಾಕಿಂಗ್ ವಿಚಾರ ಅಂದ್ರೆ ಅದ್ರಲ್ಲಿ 7,642 ಮಂದಿ ಮಕ್ಕಳೇ ಸೇರಿದ್ದಾರೆ. ಇದಲ್ಲದೆ 5 ವರ್ಷ ವಯಸ್ಸಿನ 46 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಇನ್ನು ಇಡೀ ವರ್ಷದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 27,136 ಮಂದಿ ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಸೋಂಕಿನಿಂದಾಗಿ ಶ್ವಾಸಕೋಶ ಊದಿಕೊಳ್ಳುತ್ತೆ. ನಂತರ ಅದ್ರಲ್ಲಿ ದ್ರವ ಪದಾರ್ಥ ತುಂಬಿಕೊಳ್ಳುತ್ತೆ. ಹೆಚ್ಚಿನ ನ್ಯುಮೋನಿಯಾ ಬ್ಯಾಕ್ಟೀರಿಯಾಗಳಿಂದಲೇ ಆಗ್ತಾ ಇವೆ.

-masthmagaa.com

Contact Us for Advertisement

Leave a Reply