ರಷ್ಯಾ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ 8 ಬಲಿ

masthmagaa.com:

ರಷ್ಯಾದ ಪರ್ನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ಆಗಿದೆ. ಈ ಕ್ಷಣದ ಮಾಹಿತಿ ಪ್ರಕಾರ 8 ಮಂದಿ ಪ್ರಾಣ ಕಳೆದುಕೊಂಡಿದ್ದು ಹಲವರು ಗಾಯಗೊಂಡಿದ್ದಾರೆ. ದಾಳಿ ಮಾಡಿದ ಆಗಂತುಕನನ್ನ ಬಂಧಿಸಲಾಗಿದೆ ಅಂತ ವರದಿಯಾಗ್ತಿದೆ. ರಷ್ಯಾದಲ್ಲಿ ಅಮೆರಿಕದಂತೆ ಈಸಿಯಾಗಿ ಬಂದೂಕು ತಗೋಳಕೆ ಆಗಲ್ಲ. ಆದ್ರೂನು ಇತ್ತೀಚೆಗೆ ಇಲ್ಲಿ ಇಂತಾ ಶೂಟಿಂಗ್ ಘಟನೆಗಳು ಜಾಸ್ತಿ ಆಗ್ತಿವೆ. ಇದೇ ವರ್ಷದ ಮೇ ತಿಂಗಳಲ್ಲೂ ಖಝಾನ್ ನಗರದಲ್ಲಿ ಶಾಲೆಯೊಂದರಲ್ಲಿ ಗುಂಡಿನ ದಾಳಿ ಆಗಿತ್ತು. ಆಗ 19 ವರ್ಷದ ಬಾಲಕ 9 ಜನರ ಜೀವ ಬಲಿ ಪಡೆದಿದ್ದ.

-masthmagaa.com

Contact Us for Advertisement

Leave a Reply