masthmagaa.com:

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಭಾನುವಾರ ಭಾರಿ ಗದ್ದಲ ಎಬ್ಬಿಸಿದ್ದ 8 ಮಂದಿ ವಿಪಕ್ಷ ಸಂಸದರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡವರಲ್ಲಿ ರಾಜ್ಯಸಭಾ ಉಪಸಭಾಪತಿ ಎದುರು ರೂಲ್ ಬುಕ್ ಹರಿದು ಹಾಕಿ, ಅವರ ಮೈಕನ್ನು ಎಳೆದಾಡಿದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಕೂಡ ಇದ್ದಾರೆ. ಇವರ ಜೊತೆಗೆ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಕಾಂಗ್ರೆಸ್​ನ ರಾಜೀವ್ ಸತವ್, ಸೈಯದ್ ನಸೀರ್ ಹುಸೇನ್, ರಿಪುನ್ ಬೋರಾ, ಸಿಪಿಐಎಂನ ಕೆ.ಕೆ. ರಾಗೇಶ್, ಎಲಮಾರನ್ ಕರೀಂ ಮತ್ತು ಟಿಎಂಸಿಯ ಡೋಲಾ ಸೇನ್ ಸೇರಿದ್ದಾರೆ.

ಅಶಿಸ್ತಿನ ವರ್ತನೆ ಮತ್ತು ಉಪಸಭಾಪತಿ ಹರಿವಂಶ್ ಸಿಂಗ್​ಗೆ ಬೆದರಿಕೆ ಹಾಕಿದ ಹಿನ್ನೆಲೆ ಈ 8 ಮಂದಿ ಸಂಸದರನ್ನು ಒಂದು ವಾರ ಕಾಲ ಅಮಾನತು ಮಾಡಲಾಗಿದೆ ಅಂತ ರಾಜ್ಯಸಭಾ ಸ್ಪೀಕರ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ರು. ಇದರ ಬೆನ್ನಲ್ಲೇ 8 ಸದಸ್ಯರನ್ನು ಅಮಾನತುಗೊಳಿಸುವಂತೆ ಕೋರಿ ಮಂಡಿಸಿದ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯ್ತು. ಸಂಸದರ ಅಮಾನತನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿವೆ. ಈ ಹಿನ್ನೆಲೆ ರಾಜ್ಯಸಭಾ ಕಲಾಪವನ್ನು ಹಲವು ಬಾರಿ ಮುಂದೂಡಲಾಯ್ತು.

ಇನ್ನು ರಾಜ್ಯಸಭೆ ಉಪಸಭಾಪತಿ ಹರಿವಂಶ್ ಸಿಂಗ್ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಕೂಡ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ.

-masthmagaa.com

Contact Us for Advertisement

Leave a Reply