ತಾಲಿಬಾನಿಗಳನ್ನು ಹೊಡೆದುರುಳಿಸಿದ ಪಂಜ್​​ಶಿರ್ ಗ್ಯಾಂಗ್!

masthmagaa.com:

ಅಮೆರಿಕನ್ನರು ಹೊರಹೋಗ್ತಿದ್ದಂತೆ ತಾಲಿಬಾನಿಗಳು ತಮ್ಮ ಕೈಯಿಂದ ಹೊರಗುಳಿದಿರೋ ಪಂಜ್​ಶಿರ್ ಮೇಲೆ ಮುಗಿಬಿದ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಹ್ಮದ್ ಮಸ್ಸೌದ್ ನೇತೃತ್ವದ ಅಫ್ಘಾನಿಸ್ತಾನ್ ರೆಸಿಸ್ಟೆನ್ಸ್ ಫೋರ್ಸ್​ ವಕ್ತಾರ ಫಹೀಮ್ ಡ್ಯಾಸ್ಟಿ, ಸೋಮವಾರ ರಾತ್ರಿ ತಾಲಿಬಾನಿಗಳ ವಿರುದ್ಧ ಕಾದಾಟ ನಡೆದಿದೆ. ಇದ್ರಲ್ಲಿ ಏಳರಿಂದ 8 ಮಂದಿ ತಾಲಿಬಾನಿಗಳನ್ನು ಹೊಡೆದುರುಳಿಸಿದ್ದೇವೆ. ಎರಡೂ ಕಡೆಯವರಿಗೆ ಸ್ವಲ್ಪ ಗಾಯಗಳಾಗಿವೆ ಅಂತ ಹೇಳಿದ್ದಾರೆ. ಆದ್ರೆ ಕೆಲ ಮಾಧ್ಯಮಗಳಲ್ಲಿ 80ರಿಂದ 90 ಮಂದಿ ತಾಲಿಬಾನಿಗಳು ಪ್ರಾಣ ಬಿಟ್ಟಿದ್ದಾರೆ ಅಂತಲೂ ವರದಿಯಾಗಿದೆ. ಇನ್ನು ಮೊನ್ನೆ ಭಾನುವಾರ ತಾಲಿಬಾನಿಗಳು ಪಂಜ್​ಶಿರ್​​ನಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಿದ್ದಾರೆ. ಈ ಮೂಲಕ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಟ್ವಿಟ್ಟರ್​ನಲ್ಲಿ ತಮ್ಮ ಸಂದೇಶಗಳನ್ನು ಹಂಚಿಕೊಳ್ಳದಂತೆ ಮಾಡಿದೆ.

-masthmagaa.com

Contact Us for Advertisement

Leave a Reply