ಕೇರಳದಲ್ಲಿ ಕೋವಿಡ್‌ ಕಳವಳ!

masthmagaa.com:

ಚಳಿಗಾಲ ಬರುತ್ತಲೇ ಕೋವಿಡ್‌19 ಮಹಾಮಾರಿ ಭಾರತದಲ್ಲಿ ಮತ್ತೊಮ್ಮೆ ಅಂಬೆಗಾಲಿಡಲು ಆರಂಭಿಸಿದೆ. ದೇವರ ನಾಡು ಕೇರಳದಲ್ಲಿ ಯಮನಾಟದ ಮುನ್ಸೂಚನೆ ಎಂಬಂತೆ ಕೋವಿಡ್‌ ಕೇಸ್‌ಗಳು ಜಾಸ್ತಿಯಾಗ್ತಿವೆ. ಈ ಹಿಂದೆ ನವೆಂಬರ್‌ನಲ್ಲಿ 479 ಪ್ರಕರಣಗಳು ಕಾಣಿಸಿಕೊಂಡಿದ್ವು, ಡಿಸೆಂಬರ್‌ನಲ್ಲಿ ಮತ್ತೆ 825 ಹೊಸ ಕೇಸ್‌ಗಳು ಕಾಣಿಸಿಕೊಂಡು ಆತಂಕವನ್ನುಂಟು ಮಾಡಿವೆ. ಈ ಮೂಲಕ ದೇಶದ 90% ಕೋವಿಡ್‌ ಕೇಸ್‌ಗಳು ಕೇರಳದಲ್ಲೇ ಗೋಚರವಾಗಿವೆ. ‌ಈ ಬಗ್ಗೆ ಕೇರಳದ ರಾಜಗಿರಿ ಹಾಸ್ಪಿಟಲ್‌ನ ಮೆಡಿಕಲ್‌ ಸೂಪ್ರಿಡೆಂಟ್‌ ಮಾಹಿತಿ ನೀಡಿದ್ದು ಉಸಿರಾಟದ ತೊಂದರೆ ಇರೋ ರೋಗಿಗಳಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದು, ಹಲವು ಜನರಲ್ಲಿ ಹವಾಮಾನ ಬದಲಾವಣೆಯಿಂದಾಗಿ ಈ ತರ ಆಗಿದೆ ಅಂತ ತಿಳಿಸಿದ್ದಾರೆ. ಅಂದ್ಹಾಗೆ ನವೆಂಬರ್‌ನಲ್ಲಿ ಕೋವಿಡ್‌ನಿಂದ ಕೇರಳದಲ್ಲಿ ಓರ್ವ ಮೃತಪಟ್ಟಿದ್ದು, ಈ ತಿಂಗಳು ಇಬ್ಬರು ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply