ಕೇರಳದಲ್ಲಿ ಅಜ್ಜಿಗೆ ಅರ್ಧ ಗಂಟೆಯಲ್ಲಿ 2 ಡೋಸ್​ ಲಸಿಕೆ! ಮುಂದೇನಾಯ್ತು ಗೊತ್ತಾ?

masthmagaa.com:

ಒಂದು ಡೋಸ್​ ಕೊರೋನಾ ಲಸಿಕೆ ಹಾಕಿಸಿಕೊಂಡು ಇಂತಿಷ್ಟು ದಿನ ಆದ್ಮೇಲೆ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು ಅನ್ನೋದು ನಿಯಮ. ಆದ್ರೆ ಕೇರಳದಲ್ಲಿ 84 ವರ್ಷದ ವೃದ್ಧೆಗೆ ಬರೀ 30 ನಿಮಿಷದ ಅಂತರದಲ್ಲಿ ಎರಡೂ ಡೋಸ್​ ಲಸಿಕೆ ಹಾಕಿ ಮುಗಿಸಲಾಗಿದೆ. ಎರ್ನಾಕುಲಂ ಜಿಲ್ಲೆಯ ಅಳುವಾ ಎಂಬಲ್ಲಿ ಈ ಘಟನೆ ನಡೆದಿದೆ. ಅಂದ್ಹಾಗೆ ಈ ವೃದ್ಧೆ ತನ್ನ ಮಗನ ಜೊತೆ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಆಸ್ಪತ್ರೆಗೆ ಹೋಗಿದ್ದಾರೆ. ಮೊದಲ ಡೋಸ್ ಹಾಕ್ಕೊಂಡು ಹೊರಗೆ ಬಂದಿದ್ದಾರೆ. ಆದ್ರೆ ಬರುವಾಗ ಚಪ್ಪಲಿಯನ್ನ ಒಳಗೆ ಬಿಟ್ಟು ಬಂದಿದ್ರು. ಅದನ್ನ ತರೋಕೆ ಮತ್ತೆ ಒಳಗೆ ಹೋಗಿದ್ದಾರೆ. ಆಗ ಅಲ್ಲಿದ್ದ ಲೇಡಿ ಸಿಬ್ಬಂದಿ, ಚಪ್ಪಲಿ ಅಲ್ಲೇ ಇರ್ಲಿ. ಇಲ್ಲಿ ಕೂತ್ಕೊಳ್ಳಿ ಅಂತ ಚೇರ್​ ಮೇಲೆ ಕೂರಿಸಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದ ಮತ್ತೊಬ್ಬ ಲೇಡಿ,​ ಎರಡನೇ ಡೋಸ್ ಚುಚ್ಚಿದ್ದಾರೆ. ಈ ಅಜ್ಜಿ ಏನ್​ ಹೇಳಿದ್ರೂ ಕೇಳೋ ಸ್ಥಿತಿಯಲ್ಲಿ ಸಿಬ್ಬಂದಿ ಇರಲಿಲ್ಲವಂತೆ. ಬಳಿಕ ತಪ್ಪಿನ ಅರಿವಾಗಿ ಅಲ್ಲಿನ ಸಿಬ್ಬಂದಿ ಅಜ್ಜಿಗೆ ಏನಾದ್ರೂ ಆಗ್ಬೋದು ಅಂತ ಒಂದು ಗಂಟೆ ಕಾಲ ಅಲ್ಲೇ ಕೂರಿಸಿಕೊಂಡು ಬಳಿಕ ಕಳಿಸಿದ್ದಾರೆ. ಮನೆಗೆ ಹೋದ್ಮೇಲೂ ಕಾಲ್​ ಮಾಡಿ ಅಜ್ಜಿಯ ಆರೋಗ್ಯವನ್ನ ವಿಚಾರಿಸಿದ್ದಾರೆ. ಸದ್ಯ ಅಜ್ಜಿ ಆರಾಮಾಹಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply