ಭಾರತ ಮಿಸೈಲ್‌ ದಾಳಿ ಮಾಡುತ್ತೆ ಅಂತ ಬೆಚ್ಚಿಬಿದ್ದಿತ್ತು ಪಾಕಿಸ್ತಾನ!

masthmagaa.com:

ಪುಲ್ವಾಮ ದಾಳಿಯ ನಂತ್ರ, ಅಭಿನಂದನ್‌ ಪಾಕ್‌ ವಶದಲ್ಲಿದ್ದ ಟೈಂನಲ್ಲಿ ಭಾರತ ಒಂಬತ್ತು ಮಿಸೈಲ್‌ಗಳನ್ನ ಪಾಕ್‌ ಕಡೆಗೆ ತಿರುಗಿಸಿ ಲಾಂಚ್‌ ಮಾಡೋಕೆ ರೆಡಿ ಮಾಡಿ ಇಟ್ಟಿತ್ತು ಅನ್ನೋ ಸ್ಪೋಟಕ ಮಾಹಿತಿ ಈಗ ವರದಿಯಾಗಿದೆ. ಈ ವೇಳೆ ಪಾಕ್ ಹೇಗೆ ಬೆಚ್ಚಿಬಿದ್ದಿತ್ತು ಅಂತ ಪಾಕ್‌ನಲ್ಲಿದ್ದ ಮಾಜಿ ರಾಜತಾಂತ್ರಿಕ ಅಧಿಕಾರಿ ಅಜಯ್‌ ಬಿಸಾರಿಯ, ತಮ್ಮ Anger Management: The Troubled Diplomatic Relationship Between India and Pakistan ಅನ್ನೋ ಬುಕ್‌ನಲ್ಲಿ ರಿವೀಲ್‌ ಮಾಡಿದ್ದಾರೆ. ಅಂದು ತಾರೀಖು ಫೆಬ್ರವರಿ 27, 2019. ಏರ್‌ಫೋರ್ಸ್‌ನ ವಿಂಗ್‌ ಕಮ್ಯಾಂಡರ್‌ ಅಭಿನಂದನ್‌ ವರ್ಧಮಾನ್ ವಿಮಾನ ಪಥನವಾಗಿ ಅಭಿನಂದನ್‌ ಪಾಕ್‌ ವಶದಲ್ಲಿದ್ರು.‌ ಅವ್ರ ವೀಡಿಯೋವನ್ನ ಪಾಕ್‌ ರಿಲೀಸ್‌ ಮಾಡಿತ್ತು. ಈ ವೇಳೆ ಭಾರತ ಒಂಬತ್ತು ಮಿಸೈಲ್‌ಗಳನ್ನ ಪಾಕ್‌ ಕಡೆ ತಿರುಗಿಸಿ ಸಿಚುಯೇಶನ್‌ ಎಸ್ಕಲೇಟ್‌ ಮಾಡೋಕೆ ರೆಡಿ ಇತ್ತು. ಅಭಿನಂದನ್‌ಗೆ ಚೂರು ಹೆಚ್ಚು ಕಮ್ಮಿ ಆಗಿದ್ರೂ ಪರಿಸ್ಥಿತಿ ಬೇರೇನೆ ಇರ್ತಿತ್ತು ಅಂತ ಬಿಸಾರಿಯಾ ಹೇಳಿದ್ದಾರೆ. ಅಲ್ದೇ ಅದೇ ದಿನ ಮಧ್ಯರಾತ್ರಿ ಭಾರತದ ಅಗ್ರೆಸಿವ್‌ ಮೂವ್‌ಗೆ ಬೆಚ್ಚಿಬಿದ್ದ ಪಾಕ್‌ ಅಧಿಕಾರಿಗಳು, ಹೈ ಕಮಿಷನರ್‌ ಅಜಯ್‌ ಬಿಸಾರಿಯಾಗೆ ಕಾಲ್‌ ಮಾಡಿದ್ರು. ಪ್ರಧಾನಿ ಇಮ್ರಾನ್‌ ಖಾನ್‌ ಇಮೀಡಿಯೇಟ್‌ ಆಗಿ ಮೋದಿ ಸಾಬ್‌ ಜೊತೆ ಮಾತನಾಡೋಕೆ ಬಯಸಿದ್ದಾರೆ, ಈ ಬಗ್ಗೆ ಸಂಪರ್ಕ ಸಾಧಿಸೋಕೆ ಹೆಲ್ಪ್‌ ಮಾಡಿ ಅಂತ ಕೇಳಿದ್ರು. ಆದ್ರೆ ಭಾರತಕ್ಕೆ ಕಾಲ್‌ ಮಾಡಿದ ಬಿಸಾರಿಯಾಗೆ ಮೋದಿ ಅವ್ರು ಆ ಸಮಯದಲ್ಲಿ ಲಭ್ಯ ಇಲ್ಲ ಅಂತೇಳಿ ಅಂತ ಆನ್ಸರ್‌ ನೀಡಲಾಗಿತ್ತು. ಅಲ್ಲದೆ ಏನೇ ವಿಷ್ಯ ಇದ್ರೂ ಭಾರತದ ಹೈ ಕಮೀಷನರ್‌ಗೆ ಹೇಳಲಿ, ಅಂದ್ರೆ ನೀವೆ ಕೇಳಿ ಅವರ ಸಮಸ್ಯೆನ ಅಂತ ಭಾರತ ಉತ್ತರಿಸಿತ್ತು. ಇದನ್ನೇ ಬಿಸಾರಿಯ ಪಾಕ್‌ ಅಧಿಕಾರಿಗಳಿಗೆ ಹೇಳಿದ್ದಾರೆ. ಅದಾದ ಮೇಲೆ ಪಾಕ್‌ ತುಟುಕ್‌ ಪಿಟಿಕ್‌ ಅಂದಿಲ್ಲ. ಮಾರನೇ ದಿನ ಪ್ರಧಾನಿ ಇಮ್ರಾನ್‌ ಖಾನ್‌ ಅಭಿನಂದನ್‌ರನ್ನ ರಿಲೀಸ್‌ ಮಾಡಲಾಗತ್ತೆ ಅಂತ ಅಲ್ಲಿನ ಸಂಸತ್‌ನಲ್ಲಿ ಘೋಷಿಸಿದ್ರು… ಈ ರಾತ್ರಿಯನ್ನ ಮೋದಿ ಖುದ್ದು ಕತಲ್‌ ಕಿ ರಾತ್‌ ಅಂದ್ರೆ ರಕ್ತಪಾತದ ರಾತ್ರಿ ಅಂದಿದ್ರು ಅಂತ ಬಿಸಾರಿಯ ಬರೆದಿದ್ದಾರೆ. ಅಭಿನಂದನ್‌ ರಿಲೀಸ್‌ ವಿಚಾರ ನಮಗೆ ಗೊತ್ತು…. ಆದ್ರೆ ಅದ್ರ ಹಿಂದಿರೋ ಈ ರೋಚಕ ಕತೆಯನ್ನ ಅಜಯ್‌ ಬಿಸಾರಿಯ ತಮ್ಮ ಬುಕ್‌ನಲ್ಲಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಭಾರತ ಹಾಗೂ ಪಾಕ್‌ಗಳಲ್ಲಿದ್ದ ಅಮೆರಿಕ, ಬ್ರಿಟನ್‌ ರಾಯಭಾರಿಗಳೂ ಪಾಕ್‌ಗೆ ಸಿಚುಯೇಶನ್‌ ಕೈ ಮೀರುತ್ತೆ ಅಂತ ಎಚ್ಚರಿಕೆ ನೀಡಿದ್ರು. ರಾತ್ರೋರಾತ್ರಿ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕಾಲ್‌ ಮಾಡಿ, ʻಪಾಕಿಸ್ತಾನ ಅಭಿನಂದನ್‌ ರಿಲೀಸ್‌ ಮಾಡೋಕೆ ರೆಡಿ ಇದೆ. ಪುಲ್ವಾಮ ದಾಳಿ ಬಗ್ಗೆ ಕ್ರಮ ತಗೊಂಡು, ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ತಗೊಳುತ್ತೆ ಅಂದಿದ್ರು. ಅಭಿನಂದನ್‌ ಭಾರತಕ್ಕೆ ಹೋದ್ಮೇಲೆ, ಪಾಕ್‌ ಅಲ್ಲಿರೋ ಅಮೆರಿಕ, ಬ್ರಿಟನ್‌ಗಳ ರಾಜತಾಂತ್ರಿಕ ಅಧಿಕಾರಿಗಳಿಗೆ ಮೂರ್ಮೂರು ಸಲ ಸಮನ್ಸ್‌ ನೀಡಿತ್ತು‌ʼ ಅಂತೇಳಿದ್ದಾರೆ. ಅಂದ್ಹಾಗೆ ಅದೇ ವರ್ಷ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದ್ಮೇಲೆ, ಪಾಕಿಸ್ತಾನ ಅಜಯ್‌ ಬಿಸಾರಿಯರನ್ನ ಎಲ್ಸ್‌ಪೆಲ್‌ ಮಾಡಿ, ರಾಜತಾಂತ್ರಿಕ ಸಂಬಂಧಗಳಿಗೆ ಬಾಗಿಲು ಹಾಕೊಂಡಿದೆ.

-masthmagaa.com

Contact Us for Advertisement

Leave a Reply