ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌: ಒಟ್ಟಿಗೆ ರಜೆ ಹಾಕಿದ 300 ಸಿಬ್ಬಂದಿ!

masthmagaa.com:

ಟಾಟಾ ಒಡೆತನದ ಏರ್‌ ಇಂಡಿಯಾ ಏರ್‌ಲೈನ್ಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳ ಬರೋಬ್ಬರಿ 300 ಸಿಬ್ಬಂದಿ ಒಂದೇ ಸಲ ಅನಾರೋಗ್ಯದ ರಜೆ ಹಾಕಿ ಏರ್‌ಲೈನ್ಸ್‌ಗೆ ಕೈ ಕೊಟ್ಟಿದ್ದಾರೆ. ಪರಿಣಾಮ ಬರೋಬ್ಬರಿ 86 ವಿಮಾನಗಳು ಕ್ಯಾನ್ಸಲ್‌ ಆಗಿವೆ. ಮೂಲಗಳ ಪ್ರಕಾರ, ವಿಮಾನಯಾನ ಸಂಸ್ಥೆ ಟಾಟಾ ಗ್ರೂಪ್ಸ್‌ ಜೊತೆ ಮರ್ಜರ್‌ ಆದ್ಮೇಲೆ, ಸಿಬ್ಬಂದಿಗಳನ್ನ ಸಮಾನತೆಯಿಂದ ಟ್ರೀಟ್‌ ಮಾಡಲಾಗ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಸಿಬ್ಬಂದಿ ಪ್ರತಿಭಟನೆ ಅಂಗವಾಗಿ ಸಿಕ್‌ ಲೀವ್‌ ಹಾಕಿ ಮೊಬೈಲ್‌ಗಳನ್ನ ಸ್ವಿಚ್‌ ಆಪ್‌ ಮಾಡ್ಕೊಂಡಿದ್ದಾರೆ ಅಂತೇಳಲಾಗ್ತಿದೆ. ಇನ್ನು ವಿಮಾನಗಳು ಕ್ಯಾನ್ಸಲ್‌ ಅದ ಬೆನ್ನಲ್ಲೇ ನಾಗರೀಕ ವಿಮಾನಯಾನ ಸಚಿವಾಲಯ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ಗೆ ವರದಿ ನೀಡುವಂತೆ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply