masthmagaa.com:

ಕೊರೋನಾ ಸೋಂಕಿನ ಎರಡನೇ ಅಲೆ ದಿಢೀರ್ ಅಂತ ಮೆಲಕ್ಕೆದ್ದಿರೋದ್ರಿಂದ ಬೆಂಗಳೂರಿನ ಆಸ್ಪತ್ರೆಗಳು ತುಂಬಿ ಹೋಗಿವೆ. ಗಂಭೀರ ಸ್ವರೂಪದ ರೋಗಿಗಳಿಗೆ ಬೇಕಾದ ಐಸಿಯು ಬೆಡ್​​ಗಳ ಕೊರತೆ ಕಾಡತೊಡಗಿದೆ. ಬೆಂಗಳೂರಿನಲ್ಲಿರುವ ಒಟ್ಟು ಐಸಿಯು ಬೆಡ್​​ಗಳಲ್ಲಿ 90 ಪರ್ಸೆಂಟ್​ ಬೆಡ್​ಗಳು ಭರ್ತಿಯಾಗಿವೆ. ಅದೇ ರೀತಿ ವೆಂಟಿಲೇಟರ್ ಇರೋ ಐಸಿಯು ಬೆಡ್​ಗಳು 92 ಪರ್ಸೆಂಟ್ ಫುಲ್ ಆಗಿವೆ. ಕೋವಿಡ್​ ಬೆಡ್​ ಮ್ಯಾನೇಜ್ಮೆಂಟ್​ ಸಿಸ್ಟಂನ ಡೇಟಾಬೇಸ್​​ನಲ್ಲಿ ಈ ವಿಚಾರ ಗೊತ್ತಾಗಿದೆ. ಇನ್ನು ಖಾಸಗಿ ಆಸ್ಪತ್ರೆಗಳು 50 ಪರ್ಸೆಂಟ್​ ಬೆಡ್​ಗಳನ್ನ ಕೊರೋನಾ ಸೋಂಕಿತರಿಗೆ ಮೀಸಲಿಡಬೇಕು ಅಂತ ರಾಜ್ಯ ಸರ್ಕಾರ ಹೇಳಿತ್ತು. ಆದ್ರೆ ಕೆಲ ಖಾಸಗಿ ಆಸ್ಪತ್ರೆಗಳು ಅದನ್ನ ಮಾಡ್ತಿಲ್ಲ. ಹೀಗಾಗಿ ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಬಹುದು ಅಂತ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply