masthmagaa.com:
ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಬ್ಯಾನ್ ಆಗಿದ್ದ ಶ್ರೀಲಂಕಾ ಟೀಮ್ಗೆ ಮತ್ತೆ ಆಡಲು ICC ಸಮ್ಮತಿ ನೀಡಿದೆ. ಈ ಮೂಲಕ ಸರ್ಕಾರದ ಹಸ್ತಕ್ಷೇಪದಿಂದ ಐಸಿಸಿ ಹೇರಿದ್ದ ಶ್ರೀಲಂಕಾ ಮೇಲಿನ ನಿಷೇಧವನ್ನ ಇದೀಗ ವಾಪಸ್ ಪಡೆದಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಲಂಕಾ ಕ್ರಿಕೆಟ್ ಮಂಡಳಿಯನ್ನ ಶ್ರೀಲಂಕಾ ಸರ್ಕಾರ ವಜಾಗೊಳಿಸಿತ್ತು. ಸರ್ಕಾರದ ಹಸ್ತಕ್ಷೇಪವನ್ನು ಒಪ್ಪದ ಐಸಿಸಿ, ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ ಅಂತ ಲಂಕಾ ಮಂಡಳಿ ಮೇಲೆ ನಿಷೇಧ ವಿಧಿಸಿತ್ತು. ಆದ್ರೆ ಇದೀಗ ಮತ್ತೆ ಲಂಕಾಗೆ ICC ಟೂರ್ನಿಗಳನ್ನಾಡಲು ಗ್ರೀನ್ ಸಿಗ್ನಲ್ ನೀಡಿದೆ.
-masthmagaa.com
Contact Us for Advertisement