masthmagaa.com:
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮತ್ತೆ 16 ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದೆ. ಇದ್ರಲ್ಲಿ ವಿಶೇಷ ಅಂದ್ರೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣೌತ್ ವಿರುದ್ಧ, ಅಲ್ಲಿನ ಹಾಲಿ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ಕಣಕ್ಕಿಳಿದಿದ್ದಾರೆ. ಇವರ ತಂದೆ ಮಾಜಿ ಸಿಎಂ ವೀರಭದ್ರ ಸಿಂಗ್ ಹಾಗೂ ತಾಯಿ ಪ್ರತಿಭಾ ಸಿಂಗ್ ಈ ಹಿಂದೆ ಇದೇ ಕ್ಷೇತ್ರದಿಂದ ಮೂರ್ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ರು. ಈಗ್ಲೂ ಕೂಡ ತಾಯಿ ಪ್ರತಿಭಾ ಸಿಂಗ್ ಈ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟಿದ್ದು, ಸದ್ಯ ವಿಕ್ರಮಾದಿತ್ಯಸಿಂಗ್ ಕಣಕ್ಕಿಳಿದಿರೋದು ಮಂಡಿ ಕಣಕ್ಕೆ ಇನ್ನಷ್ಟು ರಂಗು ತಂದಿದೆ.
-masthmagaa.com
Contact Us for Advertisement