masthmagaa.com: ಬಾಲಿವುಡ್​ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನ ಮುಂಬೈ ಪಾಲಿಕೆ ಅಧಿಕಾರಿಗಳು ಕೆಡವಿದ್ದು ಕೆಟ್ಟ ಉದ್ದೇಶದಿಂದ ಕೂಡಿದೆ. ಹೀಗಾಗಿ ಕಟ್ಟಡಕ್ಕೆ ಆದ ಹಾನಿಯನ್ನು ಪರಿಶೀಲಿಸಲು ಮೌಲ್ಯಮಾಪಕರನ್ನು ನೇಮಿಸುವಂತೆ ಬಾಂಬೆ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ಮೌಲ್ಯಮಾಪಕರು ಕೋರ್ಟ್​ಗೆ ವರದಿ ಸಲ್ಲಿಸುತ್ತಾರೆ. ಬಳಿಕವಷ್ಟೇ ಕಂಗನಾ ರಣಾವತ್​ಗೆ ಎಷ್ಟು ಹಣವನ್ನ ಪರಿಹಾರವಾಗಿ ನೀಡಬೇಕು ಅನ್ನೋ ಬಗ್ಗೆ ಕೋರ್ಟ್​ ಆದೇಶ ಹೊರಡಿಸಲಿದೆ ಅಂತ ಬಾಂಬೆ ಹೈಕೋರ್ಟ್​ ಹೇಳಿದೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರ ಬಗ್ಗೆ ಕಾಮೆಂಟ್​ ಮಾಡುವಾಗ ಸಂಯಮ ತೋರಬೇಕು ಅಂತ ಕಂಗನಾ ರಣಾವತ್​ಗೆ ಸೂಚಿಸಲಾಗಿದೆ. ಅಂದ್ಹಾಗೆ ಸೆಪ್ಟೆಂಬರ್​ನಲ್ಲಿ ಮುಂಬೈನ ಪಾಲಿ ಹಿಲ್​​ನಲ್ಲಿದ್ದ ಕಂಗನಾ ರಣಾವತ್ ಅವರ ಕಚೇರಿ ಮತ್ತು ಬಂಗಲೆಯನ್ನ ಬಿಎಂಸಿ ಅಧಿಕಾರಿಗಳು ಕೆಡವಿ ಹಾಕಿದ್ರು. ಈ ಸಂಬಂಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾ, ಆಗಿರುವ ನಷ್ಟಕ್ಕೆ 2 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ರು. ಆದ್ರೆ ಕಂಗನಾ  2 ಕೋಟಿ ಕೇಳೋದ್ರಲ್ಲಿ ಅರ್ಥಾನೇ ಇಲ್ಲ ಅಂತ ಬಿಎಂಸಿ ಕೋರ್ಟ್​ಗೆ ತಿಳಿಸಿತ್ತು. ಇದೀಗ ಕೋರ್ಟ್ ಬಿಎಂಸಿRead More →

masthmagaa.com: ದೇಶದ್ರೋಹ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಹಾಗೂ ಆಕೆಯ ಸಹೋದರಿ ರಂಗೋಲಿ ಚಂಡೇಲ್ ಸಲ್ಲಿಸಿದ್ದ ಅರ್ಜಿಯ‌ ವಿಚಾರಣೆ ಇಂದು ಬಾಂಬೆ ಹೈಕೋರ್ಟ್‌ನಲ್ಲಿ ನಡೆಯಿತು. ಈ ವೇಳೆ ಕೋರ್ಟ್‌ ಕಂಗನಾ ಹಾಗೂ ಆಕೆಯ ಸಹೋದರಿಗೆ ಜನವರಿ 8ರಂದು ಮುಂಬೈ ಪೊಲೀಸರ ಮುಂದೆ ಹಾಜರಾಗುವಂತೆ ಹೇಳಿದೆ. ಅಲ್ಲಿವರೆಗೆ ಮುಂಬೈ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ. ಇದರಿಂದ ಇಬ್ಬರಿಗೂ ರಿಲೀಫ್‌ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಎರಡು ಸಮುದಾಯಗಳ ಮಧ್ಯೆ ಕೋಮು ದ್ವೇಷ ಸೃಷ್ಟಿ ಮಾಡಿದ ಆರೋಪಕ್ಕೆ  ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕಂಗನಾ ಮತ್ತು ರಂಗೋಲಿಗೆ ಮುಂಬೈ ಪೊಲೀಸರು ಎರಡು ಬಾರಿ ಸಮನ್ಸ್‌ ಜಾರಿ ಮಾಡಿದ್ದರು. ಆದ್ರೆ ಸಹೋದರನ ಮದುವೆ ಕಾರಣವೊಡ್ಡಿ‌ ಇಬ್ಬರೂ ವಿಚಾರಣೆಗೆ ಗೈರಾಗಿದ್ದರು. ಅಲ್ಲದೇ ತಮ್ಮ ಮೇಲಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. -masthmagaa.com Share on: WhatsAppContact Us for AdvertisementRead More →

masthmagaa.com: ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕೋ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ಮತ್ತೊಂದು ಕಾಂಟ್ರೊವರ್ಸಿ ಮೈಮೇಲೆ ಎಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಬಾಲಕನಿಗೆ ಕಂಗನಾ ಕೊಟ್ಟ ಲಿಪ್ ಕಿಸ್.. ಕಂಗನಾ ತನ್ನ ಸಹೋದರನ ಮದುವೆ ಸಮಯದಲ್ಲಿ ಬಾಲಕನಿಗೆ ಲಿಪ್ ಕಿಸ್‌ ಕೊಟ್ಟ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ʻನಾನು ಶೂಟಿಂಗ್​ಗೆ‌ ಹೊರಟು ನಿಂತಾಗ ಈತ ಹೋಗ್ಬೇಡ ಅಂದ. ನಂಗೆ ಕೆಲಸ ಇದೆ ಅಂತ ಹೇಳ್ದಾಗ ಸೀದಾ ಕಾಲ್‌ ಮೇಲೆ ಕೂತ್ಕೊಂಡು, ಹಾಗಾದ್ರೆ ಎರಡು ನಿಮಿಷ ನನ್‌ ಜೊತೆ  ಕೂತ್ಕೋ ಅಂತ ಹೇಳಿರೋ ಅವನ ನಗುಮುಖ ಈಗಲೂ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತೆʼ ಅಂತ ಎಮೋಶನಲ್‌ ಆಗಿ ಬರೆದು ಫೋಟೋ ಪೋಸ್ಟ್‌ ಮಾಡಿದ್ದಾರೆ. ಅಂದ್ಹಾಗೆ ಈ ಬಾಲಕ ಬೇರಾರೂ ಅಲ್ಲ ಕಂಗನಾಳ ಸೋದರಳಿಯ. ಆದ್ರೂ ಈ ಫೋಟೋ ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅದ್ಕೆ ಕಾರಣ ಕಂಗನಾ ಕಿಸ್​ ಕೊಟ್ಟ ಜಾಗ.. ʻಮಕ್ಳು ಅಂದ್ರೆ ಸಾಮಾನ್ಯವಾಗಿ ಕೆನ್ನೆಗೆ ಅಥವಾ ಹಣೆಗೆ ಕಿಸ್‌ ಕೊಡ್ತಾರೆ. ಲಿಪ್‌ಗೆ ಕೊಡೋದು ನಮ್ಮ ಸಂಸ್ಕೃತಿRead More →

masthmagaa.com: ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ FIR ದಾಖಲಿಸುವಂತೆ ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಅರ್ಜಿ ಸಲ್ಲಿಸಿದ್ದ ಕಾಸ್ಟಿಂಗ್ ಡೈರೆಕ್ಟರ್ ಸಾಹಿಲ್ ಸೈಯ್ಯದ್, ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕಲಾವಿದರನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸಿದ್ದಾರೆ. ಜೊತೆಗೆ ಎರಡು ಕೋಮುಗಳ ನಡುವೆ ದ್ವೇಷ ಭಾವನೆ ಪ್ರಚೋದಿಸಿದ್ದಾರೆ ಅಂತ ಆರೋಪಿಸಿದ್ರು. ಅಲ್ಲದೆ ಕಂಗನಾ ಮಾಡಿದ್ದ ಕೆಲವೊಂದು ಟ್ವೀಟ್​​ಗಳನ್ನು ಕೂಡ ಸಾಕ್ಷಿಯಾಗಿ ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ ಕಂಗನಾ ರಾಣಾವತ್ ಓರ್ವ ಪ್ರಸಿದ್ಧ ನಟಿಯಾಗಿದ್ದು, ದೊಡ್ಡ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಅವರ ಟ್ವೀಟ್​ ತುಂಬಾ ಜನರನ್ನು ರೀಚ್ ಆಗುತ್ತೆ ಅಂತ ಸಾಹಿಲ್ ಸಯ್ಯದ್ ಮಾಹಿತಿ ನೀಡಿದ್ರು. ಅರ್ಜಿ ವಿಚಾರಣೆ ನಡೆಸಿದ ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್​​ ಕೋರ್ಟ್​​​, ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ವಿರುದ್ಧ ಎಫ್​​​​ಐಆರ್ ದಾಖಲಿಸುವಂತೆ ಬಾಂದ್ರಾ ಪೊಲೀಸರಿಗೆ ಸೂಚನೆ ನೀಡಿದೆ. ಮ್ಯಾಜಿಸ್ಟ್ರೇಟ್ ಜಯದೇವ್ ಘುಲೆRead More →

masthmagaa.com: ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಂತೆಯೇ ಉತ್ತರಪ್ರದೇಶದ ಹತ್ರಾಸ್​ ಎಂಬಲ್ಲೂ ಅಂಥದ್ದೇ ಘಟನೆ ನಡೆದಿದೆ. ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದ 19 ವರ್ಷದ ಯುವತಿ ಚಿಕಿತ್ಸೆ ಫಲಿಸದೆ ನಿನ್ನೆ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ವಿಚಾರ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನೋ ಆಗ್ರಹ ಕೇಳಿಬಂದಿದೆ. ಕಳೆದ ವರ್ಷದ ಹೈದರಾಬಾದ್ ಅತ್ಯಾಚಾರ ಪ್ರಕರಣದಂತೆಯೇ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಅಂತ ನಟಿ ಕಂಗನಾ ರನಾವತ್ ಆಗ್ರಹಿಸಿದ್ದಾರೆ. ಹೈದ್ರಾಬಾದ್​ ಪ್ರಕರಣದಲ್ಲಿ ಅತ್ಯಾಚಾರಿಗಳನ್ನು ಪೊಲೀಸರು ಎನ್​ಕೌಂಟರ್​ ಮಾಡಿದ್ದರು. ಮತ್ತೊಂದುಕಡೆ ಹತ್ರಾಸ್​ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನ ಪೊಲೀಸರು ಮಧ್ಯರಾತ್ರಿ 2.30ರ ಸುಮಾರಿಗೆ ನೆರವೇರಿಸಿದ್ದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕುಟುಂಬಸ್ಥರು ಬೆಳಗ್ಗೆ ಅಂತ್ಯಸಂಸ್ಕಾರ ಮಾಡ್ತೀವಿ ಅಂದ್ರೂ ಪೊಲೀಸರು ಬಿಡಲಿಲ್ಲ. ಅವರು ತರಾತುರಿಯಲ್ಲೇ ಅಂತ್ಯಸಂಸ್ಕಾರ ಮಾಡಿದ್ರು ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಜೊತೆಗೆ ನಮಗೆ ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಯಬೇಕು ಅಂತ ಸಂತ್ರಸ್ತೆಯ ಕುಟುಂಬಸ್ಥರ ಆಗ್ರಹಿಸಿದ್ದಾರೆ. ಪ್ರಕರಣವನ್ನRead More →

masthmagaa.com: ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂದಿನ ವಾರ ಭಾರಿ ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ ಸುಶಾಂತ್ ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿರುವ ಏಮ್ಸ್​ ವೈದ್ಯರ ತಂಡ ಮುಂದಿನ ವಾರ ಸಿಬಿಐಗೆ ತನ್ನ ವರದಿಯನ್ನು ನೀಡಲಿದೆ. ಇದರೊಂದಿಗೆ ಸುಶಾಂತ್​ದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಸಿಬಿಐಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಏಮ್ಸ್​ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಪ್ರೊ. ಡಾ. ಸುಧೀರ್ ಗುಪ್ತಾ, ‘ನಮ್ಮ ಅಭಿಪ್ರಾಯವನ್ನು ಮುಂದಿನ ವಾರ ಸಿಬಿಐಗೆ ನೀಡಲಿದ್ದೇವೆ. ಪ್ರಕರಣದಲ್ಲಿ ಈ ವರದಿ ನಿರ್ಣಾಯಕವಾಗುತ್ತದೆ. ಸಿಬಿಐ ಅಧಿಕಾರಿಗಳಿಗೆ ನಮ್ಮ ವರದಿ ಬಗ್ಗೆ ಯಾವುದೇ ಅನುಮಾನ ಇರಲ್ಲ ಅಂತ ನಾವು ಭಾವಿಸಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ವರದಿಯಲ್ಲಿ ಏನಿದೆ ಅನ್ನೋದನ್ನು ಈಗಲೇ ಹಂಚಿಕೊಳ್ಳಲು ಸಾಧ್ಯವಿಲ್ಲ’ ಅಂತ ಹೇಳಿದ್ದಾರೆ. ಅಂದ್ಹಾಗೆ ಜೂನ್ 14ರಂದು ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್​ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಆದ್ರೆ ಈ ಪ್ರಕರಣದಲ್ಲಿ ಕೂಪರ್ ಆಸ್ಪತ್ರೆ ಮತ್ತು ಮುಂಬೈRead More →

masthmagaa.com: ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ. ಕಳೆದ ಮೂರು ತಿಂಗಳಿನಿಂದ ಸರ್ಕಾರದ ವಿರುದ್ಧ ಒಂದಾದ ಮೇಲೊಂದರಂತೆ ಆರೋಪ ಕೇಳಿ ಬರ್ತಿದೆ. ಸುಶಾಂತ್ ಸಿಂಗ್ ಪ್ರಕರಣದಿಂದ ಹಿಡಿದು ನೌಕಾಪಡೆಯ ಮಾಜಿ ಅಧಿಕಾರಿ ಮೇಲಿನ ಹಲ್ಲೆವರೆಗೆ ಸಾಕಷ್ಟು ಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುವಂತೆ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋ ಆರೋಪಗಳನ್ನ ಮಾಡಲಾಗ್ತಿದೆ. ಇದೆಲ್ಲದರ ನಡುವೆ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಇವತ್ತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಯನ್ನು ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅವರು, ‘ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಕೇಂದ್ರದ ಜೊತೆ ಮಾತನಾಡುತ್ತೇನೆಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ’ ಎಂದಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಮದನ್ ಶರ್ಮಾ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಬೇಲ್​ ಪಡೆದು ಹೊರಬಂದಿದ್ದ 6 ಆರೋಪಿಗಳನ್ನು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಆಡಳಿತ ಪಕ್ಷವಾದ ಶಿವಸೇನೆಯ ಶಾಖಾ ಮುಖ್ಯಸ್ಥರಾಗಿದ್ದಾರೆ. ಉಳಿದ ನಾಲ್ವರು ಶಿವಸೇನೆ ಜೊತೆ ಸಂಪರ್ಕ ಹೊಂದಿದ್ದಾರೆ. ಎಫ್​ಐಆರ್​ನಲ್ಲಿ ಐಪಿಸಿRead More →

masthmagaa.com: ಬಾಲಿವುಡ್ ನಟಿ ಕಂಗನಾ ರನಾವತ್ ಅವರ ಕಚೇರಿಯನ್ನು ಮುಂಬೈ ಪಾಲಿಕೆ ಸಿಬ್ಬಂದಿ ಕೆಡವಿದ ವಿಚಾರ ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಮಗಾದ ನಷ್ಟಕ್ಕೆ ಕಂಗನಾ ಬರೋಬ್ಬರಿ 2 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ. ಪಾಲಿಕೆ ವಿರುದ್ಧ ಬಾಂಬೆ ಹೈಕೋರ್ಟ್​ಗೆ ಈ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಕೆಲವೊಂದು ಅಂಶಗಳನ್ನ ಸೇರಿಸಿ 2 ಕೋಟಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ‘ಬಂಗಲೆಯ ಶೇ. 40ರಷ್ಟು ಭಾಗವನ್ನು ಬಿಎಂಸಿ ಕೆಡವಿದೆ. ಇದರಲ್ಲಿ ಬೆಲೆ ಬಾಳುವ ಚರಾಸ್ತಿಗಳಾದ ಸೋಫಾ, ಅಪರೂಪರದ ಆರ್ಟ್​ಗಳು ಇದ್ದವು. ಇದರಿಂದ ನನಗೆ 2 ಕೋಟಿ ನಷ್ಟವಾಗಿದೆ. ಅದನ್ನು ಪರಿಹಾರವಾಗಿ ಕೊಡಬೇಕು’ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಸೇರಿಸಿರುವುದರಿಂದ ಮೊದಲು 29 ಪುಟಗಳಿದ್ದ ಅರ್ಜಿ ಈಗ ಬರೋಬ್ಬರಿ 92 ಪುಟಗಳದ್ದಾಗಿದೆ. ಸೋಮವಾರದೊಳಗೆ ಅರ್ಜಿಗೆ ಕೆಲವೊಂದು ಅಂಶಗಳನ್ನು ಸೇರಿಸುತ್ತೇವೆ ಅಂತ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಕಳೆದ ಗುರುವಾರ ಕೋರ್ಟ್​ಗೆ ಹೇಳಿದ್ದರು. -masthmagaa.com Share on: WhatsAppContact Us for AdvertisementRead More →

masthmagaa.com: ಚಿತ್ರರಂಗದಲ್ಲೂ ಮಾದಕ ವಸ್ತುಗಳನ್ನು ಬಳಸಲಾಗುತ್ತೆ ಅಂತ ನಿನ್ನೆ ಸಂಸತ್​ನಲ್ಲಿ ಹೇಳಿದ್ದ ನಟ ಮತ್ತು ಬಿಜೆಪಿ ಸಂಸದ ರವಿ ಕಿಶನ್ ವಿರುದ್ಧ ಸಮಾಜವಾದಿ ಪಕ್ಷದ ಸಂಸದೆ ಮತ್ತು ಬಿಗ್​ಬಿ ಅಮಿತಾಭ್ ಬಚ್ಚನ್ ಅವರ ಧರ್ಮಪತ್ನಿ ಜಯಾ ಬಚ್ಚನ್​ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ‘ನಿಮಗೆ ಅನ್ನ ನೀಡುವ ಕೈಯನ್ನೇ ಕಚ್ಚುತ್ತಿದ್ದೀರಿ’ ಅಂತ ಜಯಾ ಜರಿದಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಜಯಾ ಬಚ್ಚನ್, ‘ಕೆಲವೇ ಜನರ ಕಾರಣದಿಂದಾಗಿ ನೀವು ಇಡೀ ಚಿತ್ರರಂಗದ ಹೆಸರನ್ನು ಹಾಳು ಮಾಡಲು ಸಾಧ್ಯವಿಲ್ಲ. ನಿನ್ನೆ ನಮ್ಮ ಲೋಕಸಭೆ ಸದಸ್ಯರು ಮತ್ತು ಚಿತ್ರರಂಗದವರು (ರವಿ ಕಿಶನ್) ಚಿತ್ರೋದ್ಯಮ ವಿರುದ್ಧ ಮಾತನಾಡಿದ್ದಾರೆ. ಇದು ನಿಜಕ್ಕೂ ನನಗೆ ಮುಜುಗರ ಮತ್ತು ನಾಚಿಕೆ ಉಂಟು ಮಾಡಿದೆ. ಇದೊಂಥರ ನಿಮಗೆ ಅನ್ನ ನೀಡುವ ಕೈಯನ್ನೇ ಕಚ್ಚಿದಂತೆ’ ಎಂದಿದ್ದಾರೆ. ಜಯಾ ಬಚ್ಚನ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ರವಿ ಕಿಶನ್, ‘ಜಯಾ ಬಚ್ಚನ್ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಅಂತ ನಿರೀಕ್ಷಿಸಿದ್ದೆ. ಚಿತ್ರರಂಗದಲ್ಲಿರುವ ಎಲ್ಲರೂ ಡ್ರಗ್ಸ್​ ತೆಗೆದುಕೊಳ್ಳಲ್ಲ, ಆದ್ರೆ ಜಗತ್ತಿನ ಅತಿ ದೊಡ್ಡ ಫಿಲಂRead More →

masthmagaa.com: ಸುಶಾಂತ್ ಸಿಂಗ್ ರಜಪೂತ್​ ಸಾವಿನ ಪ್ರಕರಣ, ಬಾಲಿವುಡ್​ನಲ್ಲಿ ಡ್ರಗ್ಸ್​ ಮಾಫಿಯಾ, ಕಂಗನಾ ರನಾವತ್ ವಿರುದ್ಧ ಯುದ್ಧ, ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಸೇರಿದಂತೆ ಸಾಲು ಸಾಲು ಪ್ರಕರಣಗಳಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ, ಆಕ್ರೋಶಗಳು ವ್ಯಕ್ತವಾಗಿದೆ. ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಇಷ್ಟುದಿನ ಏನೂ ಮಾತನಾಡದೆ ಸುಮ್ಮನಾಗಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೌನ ಮುರಿದಿದ್ದು, ಇದೆಲ್ಲದರ ಹಿಂದೆ ರಾಜಕೀಯ ಪಿತೂರಿ ನಡೀತಿದೆ ಎಂದಿದ್ದಾರೆ. ‘ಕೊರೋನಾ ಹಾವಳಿ ಮುಗಿದಿದೆ ಅಂತ ಕೆಲವರು ಅಂದುಕೊಂಡಿದ್ದು ಮತ್ತೆ ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದಾರೆ. ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಆದ್ರೆ ಮಹಾರಾಷ್ಟ್ರದ ಹೆಸರನ್ನು ಕೆಡಿಸಲು ಪಿತೂರಿ ನಡೆಯುತ್ತಿದೆ. ನಾನು ಮೌನವಾಗಿದ್ದೀನಿ ಅಂದ್ರೆ ಅದರರ್ಥ ನನ್ನ ಬಳಿ ಉತ್ತರಗಳಿಲ್ಲ ಅಂತಲ್ಲ’ ಅಂತ ಉದ್ಧವ್ ಠಾಕ್ರೆ ಸಿಡಿದೆದ್ದಿದ್ದಾರೆ. ಇನ್ನು ಹಲ್ಲೆಗೊಳಗಾದ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಅವರು ಉದ್ಧವ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ‘ಸರ್ಕಾರವನ್ನು ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ.Read More →