ಪಂಜಾಬ್‌ನಿಂದ ಪಲಾಯನ ಮಾಡಿದ ಅಮೃತ್‌ ಪಾಲ್‌ ಸಿಂಗ್‌! ಪೊಲೀಸ್‌ ಅಧಿಕೃತ ಮಾಹಿತಿ!

masthmagaa.com:

ಮೆಗಾ ಸೀರಿಯಲ್‌ ರೀತಿ ಸಾಗ್ತಿರೋ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಬಂಧನದ ಕಾರ್ಯಾಚರಣೆ ಮುಂದುವರೆದಿದೆ. ಇದರ ನಡುವೆಯೇ ಈ ಕಡೆ ಛತ್ತೀಸ್‌ಗಢ್ ರಾಜಧಾನಿ ರಾಯಪುರ್‌ದಲ್ಲಿ‌ ಅಮೃತ್‌ ಪಾಲ್‌ ಬೆಂಬಲಿಗರು ರ್ಯಾಲಿ ನಡೆಸಿದ್ದಾರೆ. ಅಲ್ಲಿನ ಆಪ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಅವರ ಪ್ರತಿರೂಪವನ್ನ ಸುಟ್ಟು ಹಾಕಿದ್ದಾರೆ. ಇನ್ನೊಂದ್‌ ಕಡೆ ಅಮೃತ್‌ಪಾಲ್‌ನಿಗೆ ಸೆಕ್ಯುರಿಟಿ ಒದಗಿಸುತ್ತಿದ್ದ ವ್ಯಕ್ತಿಯನ್ನ ಪಂಜಾಬ್‌ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇನ್ನು ಅಮೃತ್‌ಪಾಲ್‌ ಪಂಜಾಬ್‌ನಲ್ಲಿಲ್ಲ, ಆತ ಪಂಜಾಬ್‌ನಿಂದ ಈಗಾಗಲೇ ಹೊರಗೆ ಹೋಗಿಬಿಟ್ಟಾಗಿದೆ ಅಂತ ಪೊಲೀಸರು ಹೇಳಿದ್ದಾರೆ. ಅಮೃತ್‌ಪಾಲ್‌ ವಿರುದ್ದದ ಕಾರ್ಯಾಚರಣೆ ಆರಂಭಿಸಿದಾಗ ಪಂಜಾಬ್‌ನಿಂದ ಪರಾರಿಯಾಗಿ ಹರಿಯಾಣಕ್ಕೆ ಹೋಗಿದ್ದ. ಅಲ್ಲಿ ಆತನ ಆಪ್ತರ ಮನೆಯಲ್ಲಿ ಉಳಿದುಕೊಂಡಿದ್ದ ಅಂತ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಆತನಿಗೆ ಆಶ್ರಯ ನೀಡಿದ್ದ ಬಲ್ಜೀತ್‌ ಕೌರ್‌ ಅನ್ನೊ ಮಹಿಳೆಯನ್ನ ಕೂಡ ಅರೆಸ್ಟ್ ಮಾಡಲಾಗಿದೆ. ಇನ್ನು ಈ ಕಡೆ ಪಂಜಾಬಿ ಸಿಂಗರ್‌ ಶುಭ್‌ನೀತ್‌ ಸಿಂಗ್‌ ಪಂಜಾಬ್‌ನಲ್ಲಿ ನಡಿತೀರೊ ಕಾರ್ಯಚರಣೆ ಹಿನ್ನೆಲೆಯಲ್ಲಿ ವಿವಾದಾತ್ಮಕ ಪೋಸ್ಟ್‌ ಶೇರ್‌ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಮ್ಯಾಪ್‌ನ್ನ ಶೇರ್‌ ಮಾಡಿದ್ದು, ಮ್ಯಾಪ್‌ನಲ್ಲಿ ಜಮ್ಮು-ಕಾಶ್ಮೀರ, ಪಂಜಾಬ್‌ ಹಾಗೂ ಈಶಾನ್ಯ ರಾಜ್ಯಗಳನ್ನ ತೆಗೆದು ಹಾಕಲಾಗಿದೆ. ಹಾಗೂ ಕ್ಯಾಪ್ಶನ್‌ನಲ್ಲಿ ʻಪ್ರೇ ಫಾರ್‌ ಪಂಜಾಬ್‌ʼ ಅಂದ್ರೆ ಪಂಜಾಬ್‌ಗಾಗಿ ಪ್ರಾರ್ಥಿಸಿ ಅಂತ ಬರೆದುಕೊಂಡಿದ್ದಾರೆ. ಇದಕ್ಕೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಪ್ರತಿಕ್ರಿಯಿಸಿದ್ದು, ಖಲಿಸ್ತಾನಿ ಅನ್ನೊ ವೈರಸ್‌, ಪಂಜಾಬಿ ಸೆಲೆಬ್ರೆಟಿಗಳಿಗೂ ತಗುಲಿದೆ. ಭಾರತದ ಮ್ಯಾಪ್‌ನ್ನ ಈ ರೀತಿ ವಿಕಾರಗೊಳಿಸೋ ಅಪರಾಧಿಗಳ ವಿರುದ್ದ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply