ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್‌ ಹೆಸರು!

masthmagaa.com:

ಇನ್ನು ಈ ಕಡೆ ಪ್ರಜ್ವಲ್‌ ಕೇಸ್‌ನ ತನಿಖೆ ವಿಚಾರದಲ್ಲೂ ಒಂದಷ್ಟು ಬೆಳವಣಿಗೆಯಾಗಿದೆ. ದೇಶದ ಹೊರಗಿರೋ ಪ್ರಜ್ವಲ್‌ ಬಗ್ಗೆ ಮಾಹಿತಿ ಕೊಡಿ ಅಂತ ಎಸ್‌ಐಟಿ ಇಂಟರ್‌ಪೋಲ್‌ಗೂ ಮನವಿ ಮಾಡಿತ್ತು. ಇದೀಗ ಸಿಬಿಐ ಮೂಲಕ ಇಂಟರ್‌ಪೋಲ್‌ SITಗೆ ಮಾಹಿತಿ ಹಂಚಿಕೊಂಡಿದೆ. ಪ್ರಜ್ವಲ್ ರೇವಣ್ಣ ಯಾವುದೇ ವಿಮಾನ ನಿಲ್ದಾಣ, ಬಂದರು, ಗಡಿಯಲ್ಲಿ ಕಾಣಿಸಿಕೊಂಡರೆ ಮಾಹಿತಿ ನೀಡ್ತೀವಿ ಅಂತ ಇಂಟರ್ಫೋಲ್ ಎಸ್ ಐಟಿಗೆ ತಿಳಿಸಿದೆ. ಇನ್ನೊಂದ್ಕಡೆ SIT ಕಸ್ಟಡಿಯಲ್ಲಿರೋ ಶಾಸಕ ರೇವಣ್ಣ ಸಲ್ಲಿಸಿರೋ ನಿಯಮಿತ ಜಾಮೀನು ಅರ್ಜಿ ಸಂಬಂಧ ಎಸ್‌ಐಟಿಗೆ ನೋಟಿಸ್‌ ಜಾರಿ ಮಾಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ವಿಚಾರಣೆ ವೇಳೆ ʻಆರೋಪಿ ಪೊಲೀಸ್‌ ಕಸ್ಟಡಿಯಲ್ಲಿ ಇರೋವಾಗ, ಆತ ಜಾಮೀನು ಕೋರಿ ಸಲ್ಲಿಸಿರೋ ಅರ್ಜಿಯ ವಿಚಾರಣೆ ನಡೆಸ್ಬೋದಾ…ಅನ್ನೋ ಬಗ್ಗೆ ಆಕ್ಷೇಪಣೆ ಸಲ್ಲಿಸಿ ಅಂತ ಎಸ್‌ಟಿಗೆ ನೋಟಿಸ್‌ ನೀಡಿದೆ. ಜೊತೆಗೆ ವಿಚಾರಣೆಯನ್ನ ಮೇ 08ಕ್ಕೆ ಮುಂದೂಡಿದೆ. ಮತ್ತೊಂದು ಕಡೆ ಈ ಪ್ರಕರಣದಲ್ಲಿ ಹಾಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೆಸರು ಈಗ ಜೋರಾಗಿ ಕೇಳಿಬರ್ತಿದೆ. ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ, ಇದರಲ್ಲಿ ಡಿಕೆ ಕೈವಾಡ ಇದೆ ಅಂತೇಳಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಡಿಕೆಶಿ ದನಿ ಎನ್ನಲಾದ ಶಬ್ದಗಳು ಬಂದಿದ್ದು ಇದರ ಬೆನ್ನಲ್ಲೇ ಇದಕ್ಕೆ ಡಿಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದೆಲ್ಲಾ ಸುಳ್ಳು ನಂಬಬೇಡಿ ಅದಕ್ಕೂ ನನಗೂ ಸಂಬಂಧ ಇಲ್ಲ ಅಂತೇಳಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ರಿಯಾಕ್ಟ್‌ ಮಾಡಿ ʻಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿಕೆ ಶಿವಕುಮಾರ್‌ ಪಿತೂರಿ ಎದ್ದು ಕಾಣ್ತಿದೆ. ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಲು… ಪ್ರಕರಣವನ್ನ ಸರ್ಕಾರ ಸಿಬಿಐಗೆ ವಹಿಸಲಿ. ಯಾಕಂದ್ರೆ ನಮಗೆ ಎಸ್‌ಐಟಿ ಅಂದ್ರೆ ಶಿವಕುಮಾರ್‌ ಇನ್ವಿಸ್ಟೆಗೇಷನ್‌ ಏಜೆನ್ಸಿ ಮೇಲೆ ನಂಬಿಕೆ ಇಲ್ಲ. ಎಸ್‌ಐಟಿ ಅಧಿಕಾರಿಗಳು ಕಾಂಗ್ರೆಸ್‌ ನಾಯಕರ ಕೈಗೊಂಬೆಯಂತೆ ಕೆಲಸ ಮಾಡ್ತಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡೇ ಈ ಪೆನ್ ಡ್ರೈವ್‌ನ್ನ ಲೀಕ್ ಮಾಡಿದ್ದಾರೆ. ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ, ವಿಡಿಯೋ ಟಿಕ್ ಮಾಡಿದ್ದು ಸುರ್ಜೇವಾಲ ಅವ್ರೆಲ್ಲಾ ಒಂದು ಟೀಮ್‌. ಡಿಕೆ ಶಿವಕುಮಾರ್‌ರನ್ನ ಸಂಪುಟದಿಂದ ಕೈಬಿಡಬೇಕುʼ ಅಂತ ಆಗ್ರಹಿಸಿದ್ದಾರೆ. ಇನ್ನೊಂದು ಕಡೆ ಈ ಪ್ರಕರಣದಲ್ಲಿ ಮೂರು S ಗಳ ಪಾತ್ರ ಇದೆ. ಅಂದ್ರೆ ಸುರ್ಜೇವಾಲ, ಶಿವಕುಮಾರ್‌ ಮತ್ತು ಸಿದ್ರಾಮಯ್ಯ ಪಾತ್ರವಿದೆ ಅಂತ ವಿಪಕ್ಷ ನಾಯಕ ಆರ್‌ ಅಶೋಕ್‌ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply