ಮುಸ್ಲಿಂರನ್ನ ದ್ವೇಷಿಸಲ್ಲ, ಇಸ್ಲಾಂ ವಿರೋಧಿಸಲ್ಲ: ಪ್ರಧಾನಿ ಮೋದಿ

masthmagaa.com:

ದೇಶದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿರೋ ಪ್ರಜ್ವಲ್‌ ರೇವಣ್ಣ ಕೇಸ್‌ ವಿಚಾರವಾಗಿ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ʻʻಪ್ರಜ್ವಲ್‌ಗೆ ಕಠಿಣ ರೀತಿಯಲ್ಲಿ ಶಿಕ್ಷೆ ಆಗಬೇಕು. ಇದರ ಬಗ್ಗೆ ಚೂರು ಸಹಾನುಭೂತಿ ಇಲ್ಲ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆ ಜಾಸ್ತಿ ಇದೆ. ಕಾನೂನು ಸುವ್ಯವಸ್ಥೆ ರಾಜ್ಯಾಡಳಿತಕ್ಕೆ ಬರೋದ್ರಿಂದ ಅವರು ಈ ಬಗ್ಗೆ ಕ್ರಮ ತಗೋಬೇಕು. ಪ್ರಜ್ವಲ್‌ ವಿದೇಶಕ್ಕೆ ಹೋಗೋಕೆ ರಾಜ್ಯ ಸರ್ಕಾರವ ಹೊಣೆ ಅಂತೇಳಿದ್ದಾರೆ. ಜೊತೆಗೆ ಈ ವಿಡಿಯೋಗಳನ್ನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇದ್ದಾಗ ರೆಕಾರ್ಡ್‌ ಮಾಡಲಾಗಿದೆ. ಒಕ್ಕಲಿಗರು ಮತದಾನ ಮಾಡಿದ ನಂತರ ವಿಡಿಯೋ ರಿಲೀಸ್‌ ಆಗಿದೆ. ಇದು ಪೊಲಿಟಿಕಲ್‌ ಗೇಮ್‌ ಅನ್ನೋದು ಸ್ಪಷ್ಟ ಅಂತ ಮೋದಿ ಕಾಂಗ್ರೆಸ್‌ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ..

ಇನ್ನು ಖಾಸಗೀ ಮಾಧ್ಯಮಕ್ಕೆ ಕೊಟ್ಟ ಸಂಧರ್ಶನದಲ್ಲಿ ಚುನಾವಣೆ ಹೊತ್ತಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಮೇಲೆ ಮುಸ್ಲಿಂ ವಿರೋಧಿ ಅನ್ನೋ ಆರೋಪಕ್ಕೆ ಸಂಬಂಧಪಟ್ಟಂತೆ ಈಗ ಖುದ್ದು ಮೋದಿಯವರೇ ರಿಯಾಕ್ಟ್‌ ಮಾಡಿದ್ದಾರೆ. ʻʻನಾನು ಮುಸ್ಲಿಂರನ್ನ ದ್ವೇಷಿಸೋದೂ ಇಲ್ಲ…. ಇಸ್ಲಾಂನ್ನ ವಿರೋಧಿಸೋದು ಇಲ್ಲ ಅಂತ ಹೇಳಿದ್ದಾರೆ. ʻಮುಸ್ಲಿಂರನ್ನ ಅಥ್ವಾ ಇಸ್ಲಾಂನ ನಾವು ವಿರೋಧಿಸಲ್ಲ. ಇದು ನಮ್ಮ ಕೆಲಸಾನೇ ಅಲ್ಲ. ಇದನ್ನ ಮುಸ್ಲಿಂ ಸಮುದಾಯದವ್ರು ಸರಿಯಾಗಿ ಅರ್ಥ ಮಾಡ್ಕೋಬೇಕು. ನಾನು ತ್ರಿವಳಿ ತಲಾಖ್‌ನಂತಹ ಸಂಪ್ರದಾಯ ತೆಗೆದಾಕಿದಾಗ, ಆಯುಷ್ಮಾನ್‌ ಕಾರ್ಡ್‌ ಅಥ್ವಾ ಕೋವಿಡ್‌ ವ್ಯಾಕ್ಸಿನ್‌ ನೀಡಿದಾಗ… ಮುಸ್ಲಿಂ ಸಹೋದರಿಯರಿಗೆ ನಾನು ಯಾವ್ದೇ ರೀತಿ ತಾರತಮ್ಯ ಮಾಡಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್‌, ದೇಶದ ಮುಸ್ಲಿಮರಲ್ಲಿ ಬಿಜೆಪಿ ಬಗ್ಗೆ ಭಯ ಹುಟ್ಟಿಸ್ತಿದೆ ಅಂತ ಆರೋಪಿಸಿದ್ದಾರೆ. ಅಲ್ದೆ ʻನಾವು 100% ಅನ್ನೋ ವಿಚಾರದ ಬಗ್ಗೆ ಮಾತನಾಡೋವಾಗ ಎಲ್ಲಾ ಸಮುದಾಯಗಳನ್ನ ಇನ್ವಾಲ್ವ್‌ ಮಾಡ್ತೀವಿ. ಎಲ್ಲರಿಗೂ ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತತೆಯ ಗ್ಯಾರಂಟಿ ನೀಡಲಾಗುತ್ತೆ… ಮುಸ್ಲಿಂ ಸಮಾಜ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಅಂತ ಕೇಳ್ಕೊಂಡಿದ್ದಾರೆ. ಅಲ್ದೆ ದೇಶ ಮುಂದೆ ಸಾಗ್ತಿದೆ. ಆದ್ರೆ ನಿಮ್ಮ ಸಮುದಾಯ ಹಿಂದುಳಿಯೋಕೆ ಕಾರಣವೇನು ಅಂತ ಮೊದಲು ಕಂಡುಕೊಳ್ಳಿ. ಕಾಂಗ್ರೆಸ್‌ ಅಧಿಕಾರದಲ್ಲಿರೋವಾಗ ನಿಮಗೆ ಸರ್ಕಾರಿ ಬೆನಿಫಿಟ್ಸ್‌ ಯಾಕೆ ಸಿಕ್ಕಿಲ್ಲ? ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಿ. ನನಗೆ ಯಾವೊಂದು ಸಮುದಾಯವೂ ಕೂಡ ಗುಲಾಮರಂತೆ ಜೀವನ ಸಾಗಿಸೋದು ಇಷ್ಟವಿಲ್ಲʼ ಅಂತ ಪ್ರಧಾನಿ ನೋದಿ ಹೇಳಿದ್ದಾರೆ ಜೊತೆಗೆ ʻʻನೀವು ಯಾರನ್ನ ಅಧಿಕಾರಕ್ಕೆ ತರಬೇಕು, ಯಾರನ್ನ ಅಧಿಕಾರಕ್ಕೆ ತರಬಾರದು ಅಂತ ಇನ್ನೂ ಯೋಚನೆ ಮಾಡ್ತಾ ಕೂತಿದ್ರೆ ಮುಂದೆ ನೀವು ನಿಮ್ಮ ಮಕ್ಕಳ ಭವಿಷ್ಯವನ್ನೇ ಹಾಳು ಮಾಡ್ಕೋತಿರಿ. ಜಗತ್ತಿನ ಎಲ್ಲಾ ಮುಸ್ಲಿಮರು ಈಗ ಬದಲಾಗ್ತಿದ್ದಾರೆ ಅಂತ ಪ್ರಧಾನಿ ಮೋದಿ ಮುಸ್ಲಿಮರಿಗೆ ಹೊಸ ಮೆಸೇಜ್‌ ಕೊಟ್ಟಿದ್ದಾರೆ. ಇನ್ನು ಇದೇ ವೇಳೆ ಕಾಂಗ್ರೆಸ್‌ ವಿರುದ್ದವೂ ಮೋದಿ ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply