ಹರ್ಯಾಣ: ಬಿಜೆಪಿ ಸರ್ಕಾರಕ್ಕೆ 3 ಶಾಸಕರು ಕೊಟ್ಟ ಬೆಂಬಲ ವಾಪಸ್‌!

masthmagaa.com:

ಇನ್ನು ಹರ್ಯಾಣ ರಾಜಕೀಯದಲ್ಲಿ ಮತ್ತೊಮ್ಮೆ ಬಿರುಗಾಳಿ ಏಳೋ ಸೂಚನೆ ದಟ್ಟವಾಗಿ ಕಾಣಿಸ್ತಿದೆ. ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದ ಮೂರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನ ವಾಪಾಸ್‌ ಪಡ್ಕೊಂಡಿದ್ದಾರೆ. ಹೀಗಾಗಿ ಸಧ್ಯಕ್ಕೆ ಬಿಜೆಪಿ ಬಹುಮತ ಸಾಬೀತುಪಡಿಸೋದು ಕಷ್ಟ ಅಂತೇಳಲಾಗ್ತಿದೆ. ಯಾಕಂದ್ರೆ 90 ಸೀಟಿರೋ ಹರ್ಯಾಣದಲ್ಲಿ ಬಿಜೆಪಿ 40 ಸೀಟು ಹೊಂದಿದ್ದು ಬಿಜೆಪಿ ಮಿತ್ರ ಹರ್ಯಾಣ ಲೋಕಿತ್‌ ಪಾರ್ಟಿ ಒಂದು ಸೀಟು ಮತ್ತು ಪಕ್ಷೇತರರು ಒಂದು ಸೀಟನ್ನ ಹೊಂದಿವೆ. ಎನ್‌ಡಿಎ ಒಟ್ಟು 42 ಸೀಟು ಹೊಂದಿದೆ. ಆದ್ರೆ ಬಹುಮತ ಸಾಬೀತು ಮಾಡೋಕೆ 45 ಸ್ಥಾನ ಬೇಕಿತ್ತು. ಆಕ್ಷುಲಿ 46 ಬೇಕು. ಆದ್ರೆ 2 ಸೀಟು ಖಾಲಿ ಉಳಿದಿರೋದ್ರಿಂದ ಬಹುಮತ ಸಾಬೀತುಪಡಿಸೋಕೆ 45 ಸೀಟುಗಳ ಅವಶ್ಯಕತೆ ಇತ್ತು. ಆದ್ರೆ ಈಗ ಮೂರು ಜನ ಶಾಸಕರು ನಾವು ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನ ವಾಪಸ್‌ ಪಡೀತಿವಿ. ಕಾಂಗ್ರೆಸ್‌ಗೆ ಬೆಂಬಲ ಕೊಡ್ತೀವಿ ಅಂತೇಳಿದೆ. ಹೀಗಾಗಿ ಹರ್ಯಾಣ ರಾಜಕೀಯ ಮತ್ತೊಮ್ಮೆ ಕುತೂಹಲದ ಕೇಂದ್ರಬಿಂದುವಾಗಿದೆ. ಇತ್ತೀಚಿಗಷ್ಟೇ ಮನೋಹರ್‌ ಲಾಲ್‌ ಖಟ್ಟರ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು. ಅದಕ್ಕೂ ಮೊದಲು ಅಲ್ಲಿನ ಜೆಜೆಪಿ ಪಾರ್ಟಿ ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡ್ತಿತ್ತು. ಆದ್ರೆ ರಾಜಕೀಯ ಬೆಳವಣಿಗೆ ನಡೆದು ಅಲ್ಲಿ ಬೇರೆ ಪಕ್ಷೇತರರನ್ನ ಹಿಡ್ಕೊಂಡು ಬಂದು ಬಿಜೆಪಿ ಸರ್ಕಾರ ಮಾಡಿದ್ರು. ಈಗ ಅವರು ಕೈ ಎತ್ತಿದ್ದಾರೆ. ಹೀಗಾಗಿ ವಿಪಕ್ಷಗಳ ಸಂಖ್ಯಾಬಲ 46ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಹರ್ಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಅಂತ ಕಾಂಗ್ರೆಸ್‌ ಒತ್ತಾಯ ಮಾಡಿದೆ. ಹೀಗಾಗಿ ಮುಂದಿನ ಬೆಳವಣಿಗೆಗಳ ಬಗ್ಗೆ ದೇಶದ ರಾಜಕೀಯದ ಚಿತ್ತ ಹರ್ಯಾಣ ಕಡೆಗೆ ನೆಟ್ಟಿದೆ.

-masthmagaa.com

Contact Us for Advertisement

Leave a Reply