ಇಂದಿರಾ ಗಾಂಧಿ “ಎಮರ್ಜೆನ್ಸಿ” ಸಿನಿಮಾಗೆ ಆಕ್ಷನ್ ಕಟ್ ಹೇಳಲಿರುವ ಕಂಗನಾ!!

masthmagaa.com:

ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಕುರಿತ ‘ಎಮರ್ಜೆನ್ಸಿ’ ಸಿನಿಮಾವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ದೇಶನ ಮಾಡಲಿದ್ದಾರೆ.

ಈ ಹೊಸ ಸಿನಿಮಾ ಬಗ್ಗೆ ಘೋಷಣೆ ಮಾಡಿರುವ ಕಂಗನಾ, ‘ನನಗೆ ಇನ್ನೊಮ್ಮೆ ಡೈರೆಕ್ಟರ್ ಕ್ಯಾಪ್​ ಧರಿಸಲು ಸಂತಸವಾಗುತ್ತಿದೆ. ಈ ಸಿನಿಮಾಗಾಗಿ ನಾನು 2 ವರ್ಷಕ್ಕೂ ಹೆಚ್ಚಿನ ಸಮಯವನ್ನು ನೀಡಿದ್ದೇನೆ, ಈ ಸಿನಿಮಾವನ್ನು ನನ್ನ ಹೊರತಾಗಿ ಬೇರೆ ಯಾರೂ ಕೂಡ ಉತ್ತಮವಾಗಿ ಡೈರೆಕ್ಟ್ ಮಾಡಲು ಸಾಧ್ಯವೇ ಇಲ್ಲ! ‘ಎಮರ್ಜೆನ್ಸಿ’ಗಾಗಿ ಕೆಲವು ಹೊಸ ಪ್ರಾಜೆಕ್ಟ್​ಗಳನ್ನೇ ನಾನು ತ್ಯಾಗ ಮಾಡಬೇಕಾಗಿ ಬಂದಿದೆ. ಆದರೂ ಈ ಸಿನಿಮಾವನ್ನು ನಾನು ಮಾಡುತ್ತೇನೆ ಎಂದು ಕಂಗನಾ ತಿಳಿಸಿದ್ದಾರೆ.

ಈ ಮೊದಲು ರಿವಾಲ್ವರ್ ರಾಣಿ ಸಿನಿಮಾ ನಿರ್ದೇಶಿಸಿದ್ದ ಸಾಯಿ ಕಬೀರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬುಧವಾರ ಈ ಸಂಬಂಧ ಸ್ಪಷ್ಟನೆ ನೀಡಿರುವ ಕಂಗನಾ ಕಣಾವತ್ ತಾವೇ ಈ ಸಿನಿಮಾ ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ.

masthmagaa.com

Contact Us for Advertisement

Leave a Reply