ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪ! ಸುನಾಮಿ ಅಲರ್ಟ್‌!

masthmagaa.com:

ದ್ವೀಪ ರಾಷ್ಟ್ರ ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪವಾಗಿದೆ. ಇಲ್ಲಿನ ಜಾವಾ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ಭೂಕಂಪ ಸಂಭವಿಸಿದ್ದು ರಿಕ್ಟರ್‌ ಮಾಪಕದಲ್ಲಿ 6.5 ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಗರುತ್‌ ಪ್ರದೇಶದಿಂದ ಸುಮಾರು 150 ಕಿಮೀ ದೂರದಲ್ಲಿ ಹಾಗೂ 10 ಕಿಲೋಮೀಟರ್‌ ಆಳದಲ್ಲಿ ಕಂಡು ಬಂದಿದೆ. ಇನ್ನು ಭೂಕಂಪದ ಬಳಿಕ ಸುನಾಮಿ ಏಳೋ ಭಯ ಇತ್ತು. ಆದ್ರೆ ಸಧ್ಯಕ್ಕೆ ಆ ರೀತಿ ಯಾವುದೇ ಸೂಚನೆ ಕಂಡು ಬರ್ತಿಲ್ಲ ಅಂತ ಅಲ್ಲಿನ ಹವಾಮಾನ ಇಲಾಖೆ ಹೇಳ್ತಿದೆ. ಇನ್ನು ಭೂಕಂಪನದ ಹಾನಿ ಬಗ್ಗೆ ಕೂಡ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

-masthmagaa.com

Contact Us for Advertisement

Leave a Reply