ಭಾರತ ಜೊತೆಗೆ ವ್ಯಾಪಾರ ನಡೆಸಲು ಶೆಹಬಾಜ್‌ ಶರೀಫ್‌ಗೆ ಒತ್ತಾಯ!

masthmagaa.com:

ಭಾರತದ ಜೊತೆ ವ್ಯಾಪಾರ ಮಾಡಿ ಅಂತ ಪಾಕ್‌ಗೆ ಮತ್ತೆ ಅಲ್ಲಿನ ಉದ್ಯಮಿಗಳು ಒತ್ತಡ ಹಾಕ್ತಿದ್ದಾರೆ ಅಂತ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಪಾಕ್‌ನ ಬಿಸ್‌ನೆಸ್‌ ಮ್ಯಾನ್‌ಗಳು ಮತ್ತು ಅಲ್ಲಿನ ಕೆಲ ರಾಜಕೀಯ ನಾಯಕರು ತಮ್ಮ ಪ್ರಧಾನಿ ಶೆಹಬಾಜ್‌ ಶರೀಫ್‌ರಿಗೆ ಈ ಕುರಿತು ಒತ್ತಾಯ ಹೇರ್ತಿದ್ದಾರೆ ಅಂತ ಹೇಳಲಾಗ್ತಿದೆ. `ಭಾರತದ ಜೊತೆ ವ್ಯಾಪಾರದ ಮಾತುಕತೆ ಪ್ರಾರಂಭಿಸಿ. ಪಾಕ್‌ನ ವ್ಯಾಪಾರ ಮತ್ತು ವಾಣಿಜ್ಯವನ್ನ ಪ್ರಮೋಟ್‌ ಮಾಡಿ… ಈಗಿರೋ ನಮ್ಮ ಆರ್ಥಿಕ ಪರಿಸ್ಥಿತಿಯನ್ನ ದೂರ ಮಾಡಿ’ ಅಂತ ಪಾಕ್ ಪಿಎಂ ಬಳಿ ಕೇಳ್ಕೊಳ್ತಿದ್ದಾರಂತೆ. ಅಂದ್ಹಾಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರೋ ಪಾಕಿಸ್ತಾನವನ್ನ ಹೊರತರೋ ಬಗ್ಗೆ ಶೆಹಬಾಜ್‌ ಶರೀಫ್‌ ಸಭೆಯೊಂದನ್ನ ನಡೆಸಿದ್ರು. ಈ ವೇಳೆ ಪಾಕ್‌ನ ಬಿಸ್‌ನೆಸ್‌ ನಾಯಕರು ಈ ರೀತಿ ಹೇಳಿದ್ದಾರೆ. ಆದ್ರೆ ಪಾಕ್‌ ಪ್ರಧಾನಿಯಿಂದ ಇದುವರೆಗೂ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅಂತಲೂ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply