ICC ವ್ಯಾಪ್ತಿಗೆ ಸೇರಲು ಒಪ್ಪಿದ ಲೆಬನಾನ್‌! ತನಿಖೆ ನಡೆಸಲು ಒತ್ತಾಯ!

masthmagaa.com:

ಕಳೆದ ವರ್ಷ ಅಕ್ಟೋಬರ್‌ನಿಂದ ತನ್ನ ಪ್ರದೇಶದಲ್ಲಿ ಆಗ್ತಿರೋ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಬಗ್ಗೆ ವಿಚಾರಣೆ ನಡೆಸುವಂತೆ ಇದೀಗ ಲೆಬನಾನ್‌ ಒತ್ತಾಯ ಮಾಡಿದೆ. ಜೊತೆಗೆ ಇದಕ್ಕಾಗಿ ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಕೋರ್ಟ್‌ ವ್ಯಾಪ್ತಿಗೆ ಸೇರಿಕೊಳ್ಳಲು ಒಪ್ಪಿಕೊಂಡಿದೆ. ಕಳೆದ ಆರು ತಿಂಗಳಲ್ಲಿ ಇಸ್ರೇಲ್‌ ತಮ್ಮ ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಮಾಡ್ತಿದೆ.. ಇರಾನ್‌ ವಿರುದ್ದ ಮತ್ತು ಇಸ್ರೇಲ್‌ ವಿರೋಧಿ ಗುಂಪುಗಳ ಮೇಲೆ ಇಸ್ರೇಲ್‌ ಏರಸ್ಟ್ರೈಕ್‌ ಮಾಡೋ ಮೂಲಕ ಅವರು ನಮ್ಮ ದೇಶಕ್ಕೆ ಸುಖಾ ಸುಮ್ಮನೇ ನುಗ್ಗುತ್ತಿದ್ದಾರೆ. ಇದರಿಂದ ನಮ್ಮ ಸಾರ್ವಭೌಮತ್ವ ಉಲ್ಲಂಘನೆ ಆಗ್ತಿದೆ. ಹೀಗಾಗಿ ಲೆಬನಾನ್‌ ಪ್ರದೇಶಗಳಲ್ಲಿ ನಡೀತಿರೋ ಅಪರಾಧಗಳ ತನಿಖೆ ನಡೆಸಿ ಅಂತ ಲೆಬನಾನ್ ನೆದರ್‌ಲ್ಯಾಂಡ್ಸ್‌ನಲ್ಲಿರೋ ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಕೋರ್ಟ್‌ಗೆ ಡಿಕ್ಲರೇಷನ್‌ ಫೈಲ್‌ ಮಾಡಿದೆ.

-masthmagaa.com

Contact Us for Advertisement

Leave a Reply