ಇಸ್ರೇಲ್‌ ಅಂತಾರಾಷ್ಟ್ರೀಯ ಕಾನೂನುಗಳನ್ನ ಪಾಲಿಸ್ತಿಲ್ಲ: ಅಮೆರಿಕ

masthmagaa.com:

ಗಾಜಾದಲ್ಲಿ ದಾಳಿ ತೀವ್ರಗೊಳಿಸಿರೋ ಇಸ್ರೇಲ್‌ ಮೇಲೆ ಅಂತಾರಾಷ್ಟ್ರೀಯ ಕಾನೂನು ಪರಿಪಾಲಿಸೋ ಸಂಬಂಧ ಈಗ ಖುದ್ದು ಅದ್ರ ಮಿತ್ರ ಅಮೆರಿಕ ಸಂಶಯ ವ್ಯಕ್ತಪಡಿಸಿದೆ. ಅಮೆರಿಕದ ಕೆಲ ಅಧಿಕಾರಿಗಳು, ʻನಾವು ಕಳಿಸ್ತಿರೋ ಶಸ್ತ್ರಾಸ್ತ್ರಗಳನ್ನ ಇಸ್ರೇಲ್‌ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನ ಅನುಸರಿಸಿ ಬಳಕೆ ಮಾಡ್ತಿದೆ ಅಂತ ಅನಿಸ್ತಿಲ್ಲ. ಈ ಬಗ್ಗೆ ನಮಗೆ ನಂಬಿಕೆ ಇಲ್ಲʼ ಅಂತ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ಗೆ ಅಡ್ವೈಸ್‌ ಮಾಡಿದ್ದಾರೆ. ಆದ್ರೆ ಇದೇ ವೇಳೆ ಅಮೆರಿಕದ ಇನ್ನುಳಿದ ಅಧಿಕಾರಿಗಳು, ಇಸ್ರೇಲ್ ಮೇಲೆ ನಂಬಿಕೆ ಇದೆ ಅಂತೇಳಿ ಬೆಂಬಲ ಸೂಚಿಸಿವೆ. ಅಂದ್ಹಾಗೆ ಫೆಬ್ರುವರಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನ್ಯಾಷನಲ್‌ ಸೆಕ್ಯುರಿಟಿ ಮೆಮೊರಾಂಡಮ್‌ ನೀಡಿದ್ರು. ಈ ಪ್ರಕಾರ ಆಂಟನಿ ಬ್ಲಿಂಕನ್‌ ಅವ್ರು ಬರೋ ಮೇ 8ರೊಳಗೆ, ಅಮೆರಿಕ ಸಪ್ಲೈ ಮಾಡ್ತಿರೋ ಶಸ್ತ್ರಾಸ್ತ್ರಗಳನ್ನ ಇಸ್ರೇಲ್‌ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸದೇ ಬಳಕೆ ಮಾಡ್ತಿದ್ಯೋ…ಇಲ್ವೋ ಅನ್ನೋ ಬಗ್ಗೆ ಸಂಸತ್ತಿಗೆ ರಿಪೋರ್ಟ್‌ ನೀಡ್ಬೇಕಿತ್ತು. ಸೋ, ಈ ಬಗ್ಗೆ ಅಧಿಕಾರಿಗಳಿಂದ ಸಲಹೆ ಪಡೆಯಲಾಗ್ತಿದೆ. ಈ ವೇಳೆ ಅಮೆರಿಕದ ಕೆಲ ಅಧಿಕಾರಿಗಳು ಇಸ್ರೇಲ್‌ ವಿರುದ್ದ ಆರೋಪ ಮಾಡಿದ್ರೆ ಮತ್ತೆ ಕೆಲವರು ಇಸ್ರೇಲ್‌ ಪರವಾಗಿ ನಿಂತಿದ್ದಾರೆ.

-masthmagaa.com

Contact Us for Advertisement

Leave a Reply