ಭಾರತದಲಿರೋ ದೇಶಭ್ರಷ್ಟ ಟಿಬೆಟ್‌ ಸರ್ಕಾರ ಬಳಿ ಮಾತಾಡಲ್ಲ: ಚೀನಾ

masthmagaa.com:

ಭಾರತದ ರಕ್ಷಣೆಯಲ್ಲಿರೋ ಟಿಬೆಟ್‌ ನಾಯಕರು ರಹಸ್ಯವಾಗಿ ಚೀನಾ ಜೊತೆಗೂ ಮಾತಾಡ್ತಿದ್ದರೆ ಅನ್ನೋ ಮಾಹಿತಿ ಹೊರಬೀಳ್ತಿದ್ಹಾಗೆ ಇದೀಗ ಚೀನಾ ಈ ಬಗ್ಗೆ ರಿಯಾಕ್ಟ್‌ ಮಾಡಿದೆ. ನಾವು ಭಾರತದಲ್ಲಿರೋ ದೇಶಭ್ರಷ್ಟ ಟಿಬೆಟ್‌ ಸರ್ಕಾರದೊಂದಿಗೆ ಮಾತುಕತೆ ನಡೆಸಲ್ಲ. ಮಾತುಕತೆ ಏನಿದ್ರು, ಟಿಬೆಟ್‌ನಲ್ಲಿರೋ ದಲಾಯಿ ಲಾಮ ಪ್ರತಿನಿಧಿಗಳೊಂದಿಗೆ ಮಾತ್ರ ಅಂತೇಳಿದೆ. ಈ ಬಗ್ಗೆ ಪತ್ರಕರ್ತರ ಬಳಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್ಬಿನ್‌ ಈ ರೀತಿ ಹೇಳಿದ್ದಾರೆ. ʻಭಾರತದ ಧರ್ಮಶಾಲಾದಲ್ಲಿರೋ ಸೋ ಕಾಲ್ಡ್ ಟಿಬೆಟ್‌ ಸರ್ಕಾರವನ್ನ ನಾವು ಪರಿಗಣಿಸಲ್ಲ. ಇದು ಚೀನಾದ ಸಂವಿಧಾನ ಮತ್ತು ಕಾನೂನುಗಳಿಗೆ ಸಂಪೂರ್ಣ ವಿರುದ್ದವಾಗಿದೆ. ಯಾವೊಂದು ದೇಶವೂ ಇದನ್ನ ಗುರುತಿಸಿಲ್ಲ. ಟಿಬೆಟ್‌ನ ದಲಾಯಿ ಲಾಮಾ ಗುಂಪಿನ ಜೊತೆ ಮಾತುಕತೆ ನಡೆಸ್ಬೇಕಾದ್ರೆ ನಾವು ಎರಡು ತತ್ವಗಳನ್ನ ಫಾಲೋ ಮಾಡ್ತೀವಿ. ಒಂದು, ನಾವು ಮಾತುಕತೆ ನಡೆಸ್ಬೇಕಾದ್ರೆ ಕೇವಲ 14ನೇ ದಲಾಯಿ ಲಾಮಾರ ಪ್ರತಿನಿಧಿಗಳೊಂದಿಗೆ ಮಾತ್ರ. ಅಂದ್ರೆ ಟಿಬೆಟ್‌ನಲ್ಲಿ ಚೀನಾದ ಅಂಕೆಯಲ್ಲಿರೋ ಟಿಬೆಟ್‌ನ ಸ್ಥಳೀಯ ಸರ್ಕಾರದ ಜೊತೆಗೆ ಮಾತ್ರ. ಬದಲಿಗೆ ಭಾರತದಲ್ಲಿರೋ ದೇಶಭ್ರಷ್ಟ ಟಿಬೆಟ್‌ ಸರ್ಕಾರದ ಪ್ರತಿನಿಧಿಗಳೊಂದಿಗೆ ಅಲ್ಲ. ಎರಡನೇಯದ್ದು, ಮಾತುಕತೆ ಕೇವಲ ಟಿಬೆಟ್‌ ವ್ಯವಸ್ಥೆಗಳ ಬಗ್ಗೇನೇ ಇರುತ್ತೆ ಹೊರತು, ಟಿಬೆಟ್‌ನ್ನ ಸ್ವತಂತ್ರಗೊಳಿಸೋ 88 ವರ್ಷದ ದಲಾಯಿ ಲಾಮಾರ ಡಿಮಾಂಡ್‌ ಬಗ್ಗೆ ಮಾತುಕತೆ ನಡೆಯಲ್ಲ. ಇನ್ನು ಟಿಬೆಟ್‌ನ ಸ್ಥಿರತೆ ಹಾಳುಮಾಡೋ ಎಲ್ಲಾ ಚಟುವಟಿಕೆಗಳನ್ನ ಅವ್ರು ತಡಿಬೇಕು,…ಅದ್ರ ಬಗ್ಗೆ ಆತ್ಮಾವಲೋಕನ ನಡೆಸ್ಬೇಕು. ಈ ರೀತಿ ಮಾಡೋದ್ರಿಂದ ನಾವೂ ಕೂಡ ಮುಂದಿನ ಹೆಜ್ಜೆ ತೆಗೆದುಕೊಳ್ಳಬಹುದುʼ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಭಾರತದಲ್ಲಿರೋ ಟಿಬೆಟ್‌ ಸರ್ಕಾರದ ರಾಜಕೀಯ ಮುಖ್ಯಸ್ಥ ಸಿಕ್ಯೊಂಗ್‌ ಅವ್ರು, ʻಕಳೆದ ವರ್ಷದಿಂದ ನಾವು ಚೀನಾ ಜೊತೆ ಗೌಪ್ಯವಾಗಿ ಮಾತುಕತೆ ನಡೆಸ್ತಿದ್ವಿ. ಸದ್ಯ ಟಿಬೆಟ್‌ನ್ನ ತಕ್ಷಣ ಸ್ವತಂತ್ರಗೊಳಿಸೋ ಬಗ್ಗೆ ಯಾವ್ದೇ ರೀತಿ ನಿರೀಕ್ಷೆ ಇಲ್ಲ. ನಾವ್‌ ಇದನ್ನ ಲಾಂಗ್‌ ಟೈಮ್‌ವರೆಗೂ ಕಂಟಿನ್ಯೂ ಮಾಡ್ತಿವಿʼ ಅಂತೇಳಿದ್ರು. ಇನ್ನು ಟಿಬೆಟ್‌ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊ ಸಂಬಂಧ 2010ರಲ್ಲಿ ಟಿಬೆಟಿಯನ್ನರ ಧರ್ಮ ಗುರು ದಲಾಲೈಮ ಹಾಗೂ ಚೀನಾ ಅಧಿಕಾರಿಗಳ ನಡುವೆ 9 ಸುತ್ತಿನ ಮಾತುಕತೆ ನಡೆದು ಈ ಟಿಬೇಟ್ ಪ್ರಸ್ತಾಪ ಮುರಿದು ಬಿದ್ದಿತ್ತು. ಆದ್ರೆ ಈಗ ಮತ್ತೆ ದಶಕದ ಬಳಿಕ ಸಿಕ್ರೇಟ್‌ ಮಾತುಕತೆ ನಡಿತಿದೆ ಅಂತೇಳಲಾಗ್ತಿತ್ತು. ಬಟ್‌ ಚೀನಾ ಇದನ್ನ ನಿರಾಕರಣೆ ಮಾಡಿದೆ. ನಮ್ಮ ಮಾತೇನಿದ್ರೂ ಟಿಬೆಟ್‌ನಲ್ಲಿರೋ ದಲೈಲಾಮಗಳ ಜೊತೆಗೆ ಮಾತ್ರ ಅಂತೇಳಿದೆ.

-masthmagaa.com

Contact Us for Advertisement

Leave a Reply