ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ವೈರಸ್ ಈ ವರ್ಷ ಜಪಾನ್ನ ಟೋಕಿಯೋದಲ್ಲಿ ನಡೆಯಲಿರೋ ಒಲಿಂಪಿಕ್ಸ್ ಮೇಲೂ ಪರಿಣಾಮ ಬೀರುವ ಲಕ್ಷಣ ಕಾಣ್ತಿದೆ. ಮೇ ಅಂತ್ಯದೊಳಗೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದಿದ್ದರೆ ಈ ಬಾರಿಯ ಒಲಿಂಪಿಕ್ಸ್ ರದ್ದಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ನಿಕ್ ಪೌಂಡ್ ಸುಳಿವು ಕೊಟ್ಟಿದ್ದಾರೆ. ಅಲ್ಲದೆ ಒಲಿಂಪಿಕ್ಸ್ ಮುಂದೂಡುವ ಅಥವಾ ಬೇರೆ ದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆ ತುಂಬಾ ಕಮ್ಮಿ ಎನ್ನಲಾಗ್ತಿದೆ. ಜಪಾನ್ನಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು ವೈರಸ್ ತಗುಲಿದವರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.
Contact Us for Advertisement2020-02-26