2020ರ ಟೋಕಿಯೋ ಒಲಿಂಪಿಕ್ಸ್​​ಗೂ ವಕ್ಕರಿಸಿದ ಕೊರೋನಾ ವೈರಸ್..!

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ವೈರಸ್ ಈ ವರ್ಷ ಜಪಾನ್​ನ ಟೋಕಿಯೋದಲ್ಲಿ ನಡೆಯಲಿರೋ ಒಲಿಂಪಿಕ್ಸ್ ಮೇಲೂ ಪರಿಣಾಮ ಬೀರುವ ಲಕ್ಷಣ ಕಾಣ್ತಿದೆ. ಮೇ ಅಂತ್ಯದೊಳಗೆ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರದಿದ್ದರೆ ಈ ಬಾರಿಯ ಒಲಿಂಪಿಕ್ಸ್​ ರದ್ದಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯ ಸದಸ್ಯರಾದ ನಿಕ್ ಪೌಂಡ್​ ಸುಳಿವು ಕೊಟ್ಟಿದ್ದಾರೆ. ಅಲ್ಲದೆ ಒಲಿಂಪಿಕ್ಸ್ ಮುಂದೂಡುವ ಅಥವಾ ಬೇರೆ ದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆ ತುಂಬಾ ಕಮ್ಮಿ ಎನ್ನಲಾಗ್ತಿದೆ. ಜಪಾನ್​ನಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು ವೈರಸ್​ ತಗುಲಿದವರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.

Contact Us for Advertisement

Leave a Reply