ಸೋನಿಯಾ, ಇಂದಿರಾ ತಾಳಿ ಹೊಂದಿದ್ರು ಅನ್ನೊದೆ ಡೌಟು- ಕೇಂದ್ರ ಸಚಿವ!

masthmagaa.com:

ಇನ್ನು ಮಹಿಳೆಯರ ಮಂಗಳ ಸೂತ್ರ ವಿಚಾರಕ್ಕೆ ಸಂಬಂಧಿಸಿದ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ದೇಶಕ್ಕಾಗಿ ಮಂಗಳಸೂತ್ರವನ್ನ ತ್ಯಾಗ ಮಾಡೊಕೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವ್ರು ಮಂಗಳಸೂತ್ರ ಹೊಂದಿದ್ರು ಅನ್ನೊದೆ ನನಗೆ ಡೌಟಿದೆ ಅಂತ ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವ ಗಿರಿರಾಜ್‌ ಸಿಂಗ್‌ ವಿವಾದಾತ್ಮಕ ಹೇಳಿದ್ದಾರೆ. ಅಂದ್ಹಾಗೆ ಪ್ರಧಾನಿ ಮೋದಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಚಿನ್ನ ಹಾಗೂ ಮಂಗಳಸೂತ್ರವನ್ನ ಕೂಡ ಕಸಿದು ಕೊಳ್ಳುತ್ತೆ ಅಂತೇಳಿದ್ರು. ಇದಕ್ಕೆ ರಿಯಾಕ್ಟ್‌ ಮಾಡಿದ್ದ ಪ್ರಿಯಂಕಾ ಗಾಂಧಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವ್ರ ಹತ್ಯೆ ಉಲ್ಲೇಖಿಸಿ ನನ್ನ ತಾಯಿ ಸೋನಿಯಾ ಗಾಂಧಿ ದೇಶಕ್ಕಾಗಿ ಮಂಗಳ ಸೂತ್ರವನ್ನೆ ತ್ಯಾಗ ಮಾಡಿದ್ದಾರೆ ಅಂತೇಳಿದ್ರು. ಅಲ್ದೇ ನನ್ನ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಯುದ್ದದ ಸನ್ನಿವೇಶಗಳಲ್ಲಿ ದೇಶಕ್ಕಾಗಿ ಚಿನ್ನವನ್ನ ದಾನ ಮಾಡಿದ್ದಾರೆ ಅಂತೇಳಿದ್ರು. ಈಗ ಇದಕ್ಕೆ ಪ್ರತಿಕ್ರಿಯೆ ನೀಡೊ ವೇಳೆ ಗಿರಿರಾಜ್‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply