2022ರಲ್ಲಿ ವಿದೇಶಗಳಿಂದ ಭಾರತಕ್ಕೆ ಭಾರಿ ಪ್ರಮಾಣದ ಹಣ ಬಂದಿದೆ: UN!

masthmagaa.com:

2022ರಲ್ಲಿ ವಿದೇಶಗಳಿಂದ ಭಾರತಕ್ಕೆ ಅತಿಹೆಚ್ಚು ಹಣ ಹರಿದು ಬಂದಿದೆ ಅನ್ನೋದು ಹೊಸ ಅಧ್ಯಯನದಿಂದ ಗೊತ್ತಾಗಿದೆ. ಸುಮಾರು 111 ಬಿಲಿಯನ್‌ ಡಾಲರ್‌ ಅಂದ್ರೆ 9.21ಲಕ್ಷ ಕೋಟಿ ರೂಪಾಯಿ ಭಾರತಕ್ಕೆ ಹರಿದಿದ್ದು, ಭಾರತ ಜಗತ್ತಲ್ಲೆ ಅತಿ ಹೆಚ್ಚು ಹಣ ಸ್ವೀಕರಿಸಿದ ದೇಶ ಅಂತ ವಿಶ್ವಸಂಸ್ಥೆ ಹೇಳಿದೆ. ಹಾಗಂತ ಇದು ಹೂಡಿಕೆ ಅಲ್ಲ..ನಾನ್‌ ಕಮರ್ಷಿಯಲ್‌ ಕರೆನ್ಸಿ.. ಅಂದ್ರೆ ಬೇರೆ ದೇಶದಲ್ಲಿ ಕೆಲ್ಸ ಮಾಡ್ತಿರೊ ಭಾರತೀಯರು ತಮ್ಮ ಕುಟುಂಬಸ್ಥರಿಗೆ ಕಳಿಸೋ ಹಣದ ಮೌಲ್ಯ ಇಷ್ಟು ಏರಿಕೆಯಾಗಿದೆ ಅಂತ ಈ ವರದಿ ಹೇಳಿದೆ. ಇನ್ನು ಭಾರತ ಬಿಟ್ರೆ ಮೆಕ್ಸಿಕೋ, ಚೀನಾ, ಫಿಲಿಫೈನ್ಸ್‌ ಹಾಗೂ ಫ್ರಾನ್ಸ್‌ ದೇಶಗಳು ಅತಿ ಹೆಚ್ಚು ಹಣ ಸ್ವೀಕರಿಸಿದ ಟಾಪ್‌ ದೇಶಗಳ ಪಟ್ಟಿಯಲ್ಲಿವೆ ಅಂತ ವಲ್ಡ್‌ ಮೈಗ್ರೇಷನ್‌ ಏಜೆನ್ಸಿ ತಿಳಿಸಿದೆ.

-masthmagaa.com

Contact Us for Advertisement

Leave a Reply