ಇಮ್ರಾನ್‌ ಪತ್ನಿಯ ಮನವಿಗೆ ಪಾಕ್ ಕೋರ್ಟ್‌ ಸಮ್ಮತಿ: ಜೈಲಿಗೆ ಶಿಫ್ಟ್!

masthmagaa.com:

ನನ್ನನ್ನ ಗೃಹಬಂಧನದಿಂದ ಜೈಲಿಗೆ ಶಿಫ್ಟ್‌ ಮಾಡಿ ಅಂತ ಇಮ್ರಾನ್‌ ಖಾನ್‌ರ ಪತ್ನಿ ಬುಶ್ರಾ ಬೀಬಿ ಮನವಿ ಮಾಡಿದ್ರು. ಆ ಮನವಿಗೆ ಪಾಕ್‌ ಕೋರ್ಟ್‌ ಒಪ್ಪಿಗೆ ಕೊಟ್ಟಿದ್ದು ಬುಶ್ರಾ ಬೀಬಿ ಅವ್ರನ್ನ ರಾವಲ್ಪಿಂಡಿಯ ಅಡ್ಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿದೆ. ಈ ಮೂಲಕ ಇಮ್ರಾನ್‌ ಇರೋ ಜೈಲಲ್ಲೆ ಅವ್ರ ಪತ್ನಿ ಕೂಡ ಇರೋದು ಕನ್ಫರ್ಮ್‌ ಆಗಿದೆ. ಅಂದ್ಹಾಗೆ ಪ್ರಧಾನಿಗೆ ಬಂದ ಗಿಫ್ಟ್‌ಗಳನ್ನ ಅಕ್ರಮವಾಗಿ ಮಾರ್ಕೊಂಡಿದ್ದಾರೆ ಅನ್ನೋ ಕೇಸಲ್ಲಿ ಇಮ್ರಾನ್‌ ಪತ್ನಿಗೆ ಗೃಹ ಬಂಧನದಲ್ಲಿ ಇಡಲಾಗಿತ್ತು. ಆದ್ರೆ ಊಟದಲ್ಲಿ ನಮಗೆ ವಿಷಪೂರಿತ ಆಹಾರ ನೀಡಲಾಗ್ತಿದೆ. ನನ್ನನ್ನ ಜೈಲಿಗೆ ಶಿಫ್ಟ್‌ ಮಾಡಿ ಅಲ್ಲೆ ಶಿಕ್ಷೆ ನೀಡಿ ಅಂತ ಬೀಬಿ ಮನವಿ ಮಾಡಿದ್ರು. ಹೀಗಾಗಿ ಕೋರ್ಟ್‌ ಈಗ ಇವ್ರ ಮನವಿಗೆ ಸಮ್ಮತಿಸಿದೆ.

-masthmagaa.com

Contact Us for Advertisement

Leave a Reply