ಮಾಜಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಕಾಳಜಿ ತೋರಿಸಿದ ಅಮೆರಿಕ!

masthmagaa.com:

ಪಾಕಿಸ್ತಾನದಲ್ಲಿ ಒಂದು ಇಂಟ್ರಸ್ಟಿಂಗ್‌ ಬೆಳವಣಿಗೆಯಾಗಿದೆ. ಬಾಯಿ ತೆರೆದ್ರೆ ಅಮೆರಿಕ ವಿರುದ್ದ ಗುಟುರು ಹಾಕ್ತಿದ್ದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪರವಾಗಿ ಖುದ್ದು ಅಮೆರಿಕ ಬ್ಯಾಟಿಂಗ್‌ ಶುರು ಮಾಡಿದೆ. ಅಮೆರಿಕದ ರಾಯಭಾರಿ ಡೊನಾಲ್ಡ್‌ ಬ್ಲೋಮ್‌ ಪಾಕಿಸ್ತಾನದ PTI ಪಕ್ಷದ ನಾಯಕರು ಮತ್ತು ವಿಪಕ್ಷದ ನಾಯಕ ಒಮರ್‌ ಆಯುಬ್‌ ಖಾನ್‌ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಮ್ರಾನ್‌ ಖಾನ್‌ ಸುರಕ್ಷತೆ ಬಗ್ಗೆ ನಮಗೆ ಕಾಳಜಿ ಇದೆ… ಇಮ್ರಾನ್‌ ಖಾನ್‌ರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಗಮನ ಹರಿಸಬೇಕು ಅಂತ ಅಮೆರಿಕ ಒತ್ತಾಯಿಸಿದೆ. ಹೀಗಂತ ಅಮೆರಿಕದ ವಕ್ತಾರ ಮಾಥ್ಯೂ ಮಿಲ್ಲರ್‌ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ಹೊಸ ರಾಜಕೀಯ ಆಟ ಶುರುವಾದಂತೆ ಕಾಣ್ತಿದೆ. ಯಾಕಂದ್ರೆ ಇಮ್ರಾನ್‌ ಖಾನ್‌ ಅಧಿಕಾರದಿಂದ ಕೆಳಗಿಳಿಯೋಕೆ ಅಲ್ಲಿ ಶೆಹಬಾಜ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಬರೋಕೆ ಅಮೆರಿಕವೇ ಕಾರಣ ಅಂತ ಇಮ್ರಾನ್‌ ಆರೋಪ ಮಾಡ್ತಿದ್ರು. ಇದು ಇಂಪೋರ್ಟ್‌ ಆದ ಸರ್ಕಾರ, ಇವರನ್ನ ಕಿತ್ತು ಬಿಸಾಡಿ ಅಂತ ಕರೆ ಕೊಡ್ತಿದ್ರು. ಅಮೆರಿಕ ಕೂಡ ಅದೇ ಥರ ನಡ್ಕೋತಿತ್ತು. ಅಲ್ಲಿನ ಸೇನಾಧಿಕಾರಿಗಳ ಜೊತೆಗೆ ಬ್ಯಾಕ್‌ ಟು ಬ್ಯಾಕ್‌ ಮೀಟಿಂಗ್‌ಗಳನ್ನ ಮಾಡ್ತಿತ್ತು. ಅಷ್ಟೇ ಅಲ್ಲ ಮೊನ್ನೆ ಪಾಕ್‌ನಲ್ಲಿ ಚುನಾವಣೆ ನಡೆದು ಇಮ್ರಾನ್‌ ಸೋತಾಗಲೂ ಇದು ಅಮೆರಿಕ ಕೆಲಸ ಅನ್ನೊ ಆರೋಪ ಕೇಳಿಬಂದಿತ್ತು. ಆದ್ರೆ ಈಗ ಪಾಕ್‌ ರಾಜಕೀಯದಲ್ಲಿ ಸೀನ್‌ ಚೇಂಜ್‌ ಆದಂತೆ ಕಾಣ್ತಿದೆ. ಮೊದಲೇ, ಉಣ್ಣೋದ್‌ ತಿನ್ನೋದು ಗಂಡನ ಮನೇಲಿ ಲವರ್‌ ಊರಲ್ಲಿ ಮಳೆಯಾಯ್ತಾ ಅನ್ನೋ ಕೆಟಗರಿ ದೇಶ ಪಾಕಿಸ್ತಾನ. ಅವರೇನ್ಮಾಡಿದ್ರು ಸೀಟ್‌ ಮೇಲೆ ಕೂತ ತಕ್ಷಣ ಚೀನಾ ಪರ ವಾಲೋಕೆ ಶುರುವಾದ್ರು. ಮೊನ್ನೆಯಷ್ಟೇ ನವಾಜ್‌ ಷರೀಫ್‌ ಅಂದ್ರೆ ಪಾಕ್‌ ಹಾಲಿ ಪಿಎಂ ಸಹೋದರ, ಪಾಕ್‌ನಲ್ಲಿ ಈಗ ಅದೃಶ್ಯ ಪ್ರಧಾನಿ ಚೀನಾಗೆ ಭೇಟಿ ಕೊಟ್ಟಿದ್ರು. ಅಲ್ಲಿ ಒಂದಷ್ಟು ಮಾತುಕತೆ ಕೂಡ ಆಗಿತ್ತು. ಹೀಗಾಗಿ ಪಾಕಿಸ್ತಾನದ ಯಜಮಾನಿನಿಗೆ ಅಂದ್ರೆ ಅಮೆರಿಕಗೆ ಕೋಪ ಶುರುವಾಗಿದೆ. ಹೀಗಾಗಿ ಅಲ್ಲಿನ ದಂಗೆಪ್ರಿಯ ನಾಯಕ ಇಮ್ರಾನ್‌ ಪರವಾಗಿ ಬ್ಯಾಂಟಿಂಗ್‌ ಶುರು ಮಾಡಿದೆ.

-masthmagaa.com

Contact Us for Advertisement

Leave a Reply