ಆಸ್ಟ್ರೇಲಿಯಾದ ಹೆಲಿಕಾಪ್ಟರ್‌ ಪ್ರಚೋದನೆ ಮಾಡ್ತು: ಚೀನಾ!

masthmagaa.com:

ಇತ್ತೀಚೆಗಷ್ಟೇ ಪಶ್ಚಿಮ ಪೆಸಿಫಿಕ್‌ ಮಹಾಸಾಗರದ ಹಳದಿ ಸಮುದ್ರ ಭಾಗದಲ್ಲಿ ಆಸ್ಟ್ರೇಲಿಯಾ ಮತ್ತು ಚೀನಾ ನಡುವೆ ಸಣ್ಣ ಜಗಳ ಆಗಿತ್ತು. ನಮ್ಮ ಮಿಲಿಟರಿ ಹೆಲಿಕಾಪ್ಟರ್‌ ಮೇಲೆ ಚೀನಿ ಯುದ್ಧ ವಿಮಾನ ಫ್ಲೇರ್‌ಗಳನ್ನ ಡ್ರಾಪ್‌ ಮಾಡಿದೆ ಅಂತ ಆಸ್ಟ್ರೇಲಿಯಾ ಆರೋಪ ಮಾಡಿತ್ತು. ಇದನ್ನ ಚೀನಾ ಈಗ ನಿರಾಕರಿಸಿದೆ. ಜೊತೆಗೆ ಇದೆಕ್ಕೆಲ್ಲಾ ನೀವೇ ಕಾರಣ ಅಂತ ಆಸ್ಟ್ರೇಲಿಯಾ ಕಡೆ ಬೆರಳು ತೋರಿಸಿದೆ. ಆಸ್ಟ್ರೇಲಿಯಾ ಹೆಲಿಕಾಪ್ಟರ್‌ ಉದ್ದೇಶಪೂರ್ವಕವಾಗಿ ಚೀನಾದ ಯುದ್ಧ ವಿಮಾನ ಹತ್ತಿರದಿಂದಲೇ ಹಾರ್ತಿತ್ತು. ಒಂದ್‌ ರೀತಿ ಪ್ರಚೋದನಕಾರಿ ನಡವಳಿಕೆ ತೋರಿಸಿತ್ತು..ಸೋ ಇದಕ್ಕೆ ನಿಮ್ಮ ಪ್ರಚೋದನೆ ಕಾರಣ ಅಂತ ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

-masthmagaa.com

Contact Us for Advertisement

Leave a Reply