ಆರ್ಥಿಕತೆ ವೃದ್ದಿಗೆ ಮಾದಕ ವಸ್ತುಗಳನ್ನ ಬೆಳೆಸ್ತಿದೆ ಪಾಕಿಸ್ತಾನ!

masthmagaa.com:

ಪಾಕಿಸ್ತಾನದ ಮತ್ತೊಂದು ನೀಚ ಕೆಲಸ ಜಗಜ್ಜಾಹೀರಾಗಿದೆ. ಸಾಲ ಸಾಲ ಅಂತ ಅಲೀತಾ ಇದ್ರೂ ಇಷ್ಟ ದಿನ ಹಣ ಎಲ್ಲೂ ಹುಟ್ಟಲಿಲ್ಲ. ಈಗ ಹತಾಶೆಗೆ ಬಿದ್ದಿರೋ ಪಾಕಿಸ್ತಾನ ಮಾದಕ ವಸ್ತುಗಳನ್ನ ಬೆಳೆಸೋಕೆ ಶುರು ಮಾಡಿದೆ. ಈ ಸಂಬಂಧ ಕಳೆದ ಫೆಬ್ರುವರಿಯಲ್ಲಿ ಪಾಕ್‌ ಸರ್ಕಾರ ಮಾದಕ ವಸ್ತು ನಿಯಂತ್ರಣ ಪ್ರಾಧಿಕಾರವನ್ನ ಸ್ಥಾಪಿಸಿ, ಅದಕ್ಕೆ ಸಂಬಂಧಿಸಿದಂತೆ ಸುಗ್ರಿವಾಜ್ಞೆಯೊಂದನ್ನ ಹೊರಡಿಸಿದೆ. ಅದ್ರಲ್ಲಿ ವೈದ್ಯಕೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಮಾದಕ ವಸ್ತುಗಳನ್ನ ಬೆಳೆಸೊದು. ಹಾಗೂ ಅವುಗಳ ಉತ್ಪಾದನೆ, ಮಾರಾಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳಿಸಲಾಗಿದೆ. ಅಷ್ಟೇ ಅಲ್ಲ ಈ ಯೋಜನೆಯಿಂದ ಪಾಕ್‌ ಆರ್ಥಿಕತೆ ವೃದ್ದಿಯಾಗೊ ನಿರೀಕ್ಷೆ ಇದೆ ಅಂತ ಹಲವು ಪತ್ರಿಕೆಗಳು ಕೂಡ ವರದಿ ಮಾಡಿವೆ. ಸ್ನೇಹಿತ್ರೇ ಇಲ್ಲಿ ಪಾಕಿಸ್ತಾನ ನಶಾ ವಸ್ತು ಬೆಳೆಯೋದು ಯಾಕ್‌ ಅಪಾಯ ಅಂದ್ರೆ ಅವರು ಅದನ್ನ ಕಳಿಸೋದೆಲ್ಲಾ ಭಾರತಕ್ಕೆ. ಈಗಾಗಲೇ ಪಂಜಾಬ್‌ ಮತ್ತು ಗುಜರಾತ್‌ ಭಾಗದಲ್ಲಿ ಕೋಟಿ ಕೋಟಿ ಮೌಲ್ಯದ ಮಾದಕ ಪದಾರ್ಥಗಳನ್ನ ಅಕ್ರಮವಾಗಿ ಪಾಕ್‌ ರಫ್ತು ಮಾಡ್ತಿದೆ. ಸೇನೆ ದಿನವೂ ಅಲ್ಲಿಂದ ಬರ್ತಿರೋ ಡ್ರೋನ್‌ಗಳನ್ನ ಹೊಡೆದಾಕಿದೆ. ಕಳೆದ ತಿಂಗಳು ಈ ನಶಾ ಸಾಮಾಗ್ರಿಗಳ ಬೋಟನ್ನೇ ಭಾರತ ಹಿಡಿದಾಕಿತ್ತು. ಬರೋಬ್ಬರಿ 600 ಕೋಟಿ ನಶಾ ವಸ್ತುಗಳು ಒಂದೇ ಕಡೆ ಸಿಕ್ಕಿದ್ವು. ಹೀಗಾಗಿ ಇಲ್ಲಿ ಪಾಕ್‌ನ ಈ ನಿರ್ಧಾರ ಭಾರತಕ್ಕೆ ಒಂದು ರೀತಿಯಲ್ಲಿ ಅಪಾಯ ಅಂತಲೇ ಹೇಳಬೇಕು.

-masthmagaa.com

Contact Us for Advertisement

Leave a Reply