ಸೌತ್‌ ಆಫ್ರಿಕಾದಲ್ಲಿ ಕಟ್ಟಡ ಕುಸಿದು 7 ಸಾವು, 40 ಜನ ನಾಪತ್ತೆ!

masthmagaa.com:

ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 7 ಜನ ಸಾವನ್ನಪ್ಪಿ, ಸುಮಾರು 40 ಜನ ಕಾರ್ಮಿಕರು ನಾಪತ್ತೆಯಾಗಿರೊ ಘಟನೆ ಸೌತ್‌ ಆಫ್ರಿಕಾದಲ್ಲಿ ನಡೆದಿದೆ. ಇಲ್ಲಿನ ಜಾರ್ಜ್‌ ಸಿಟಿಯಲ್ಲಿ 75 ಕಾರ್ಮಿಕರು ಕೆಲ್ಸ ಮಾಡ್ತಿದ್ರು… ಕನ್ಸ್ಟ್ರಕ್ಷನ್‌ ಕೆಲಸದಲ್ಲಿ ದೋಷ ಉಂಟಾಗಿ ಈ ದುರ್ಘಟನೆ ಸಂಭವಿಸಿದ್ದು ಈವರೆಗೆ ಸುಮಾರು 25 ಜನರನ್ನ ರಕ್ಷಣೆ ಮಾಡಲಾಗಿದೆ. ಇನ್ನುಳಿದವ್ರಿಗಾಗಿ ರಕ್ಷಣಾ ತಂಡ ಹುಡುಕಾಟ ನಡೆಸ್ತಿದೆ.

-masthmagaa.com

Contact Us for Advertisement

Leave a Reply