ಭಾರತೀಯ ವಾಯುಪಡೆಗೆ ರ‍್ಯಾಂಪೇಜ್‌ ಮಿಸೈಲ್‌ ಸೇರ್ಪಡೆ!

masthmagaa.com:

ಭಾರತೀಯ ವಾಯುಪಡೆ ಇದೀಗ ಯುದ್ಧ ವಿಮಾನಗಳ ಫ್ಲೀಟ್‌ಗಳಿಗೆ ಒಂದಿಷ್ಟು ಶಕ್ತಿ ತುಂಬೋ ಕೆಲಸ ಮಾಡಿದೆ. ಇಸ್ರೇಲ್‌ ಪಡೆಗಳು ಹೆಚ್ಚಾಗಿ ಬಳಸೋ ರ‍್ಯಾಂಪೇಜ್‌ ಲಾಂಗ್‌-ರೇಂಜ್‌ ಸೂಪರ್‌ಸಾನಿಕ್‌ ಏರ್‌-ಟು-ಗ್ರೌಂಡ್‌ ಮಿಸೈಲ್‌ಗಳನ್ನ ವಾಯು ಪಡೆಗೆ ಹೊಸತಾಗಿ ಸೇರಿಸಿಕೊಂಡಿದೆ. ಸುಮಾರು 200 ಕಿಮೀ ದೂರದ ಟಾರ್ಗೆಟ್‌ಗಳನ್ನ ಹೊಡೆದುರುಳಿಸೋ ಸಾಮರ್ಥ್ಯ ಈ ಮಿಸೈಲ್‌ ಹೊಂದಿದೆ ಎನ್ನಲಾಗ್ತಿದೆ. ಹೈ-ಸ್ಪೀಡ್‌ ಲೋ ಡ್ರ್ಯಾಗ್‌-ಮಾರ್ಕ್‌ 2 ಮಿಸೈಲ್‌ ಅಂತ ಕರೆಯಲಾಗೋ ಈ ಕ್ಷಿಪಣಿಯನ್ನ ಇಸ್ರೇಲ್‌ ವಾಯು ಪಡೆ ಸಾಕಷ್ಟು ಬಾರಿ ಉಪಯೋಗಿಸಿದೆ. ಅದು ಕೂಡ ಇತ್ತೀಚೆಗೆ ಇರಾನ್‌ ವಿರುದ್ಧ ನಡೆಸಲಾದ ದಾಳಿಯಲ್ಲಿ ಇದನ್ನ ಬಳಸಿದೆ ಅಂತೇಳಲಾಗ್ತಿದೆ. ಇನ್ನು ಈ ರಾಂಪೇಜ್‌ ಕ್ಷಿಪಣಿಯನ್ನ ಭಾರತೀಯ ವಾಯು ಪಡೆ… ರಷ್ಯಾ ಮೂಲದ ಏರ್‌ಕ್ರಾಫ್ಟ್‌ ಫ್ಲೀಟ್‌ನಲ್ಲಿ ಸೇರಿಸಿದೆ. ಈ ಫ್ಲೀಟ್‌ನಲ್ಲಿ Su-30 MKI, MiG-29 ಮತ್ತು Jaguarಗಳಂತಹ ಫೈಟರ್‌ ಜೆಟ್‌ಗಳಿವೆ. ಜೊತೆಗೆ ಈ ಕ್ಷಿಪಣಿಯನ್ನ MiG-29K ಅನ್ನೋ ನೇವಲ್‌ ಫೈಟರ್‌ ಜೆಟ್‌ಗಳೊಂದಿಗೂ ಸೇರಿಸಲಾಗಿದೆ. ಈ ಮಿಸೈಲ್‌ ನಿಯೋಜನೆಯಿಂದ ಕಮ್ಯುನಿಕೇಷನ್‌ ಸೆಂಟರ್ಸ್‌ ಮತ್ತು ರೇಡಾರ್‌ ಸ್ಟೇಷನ್‌ಗಳಂತಹ ಟಾರ್ಗೆಟ್‌ಗಳನ್ನ ಕೂಡ ಉಡಾಯಿಸಬಹುದಾಗಿದೆ.

-masthmagaa.com

Contact Us for Advertisement

Leave a Reply