ʻಮಾಲ್ಡೀವ್ಸ್‌ನಿಂದ‌ ಸಂಪೂರ್ಣವಾಗಿ ಭಾರತ ಸೈನಿಕರು ವಾಪಸ್ಸಾಗಿದ್ದಾರೆʼ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಮಾಲ್ಡೀವ್ಸ್‌ನಿಂದ ಭಾರತ ತನ್ನ ಸೇನೆಯನ್ನ ಸಂಪೂರ್ಣವಾಗಿ ವಾಪಾಸ್‌ ತಗೊಂಡಿದೆ ಅಂತ ಮಾಲ್ಡೀವ್ಸ್‌ ಘೋಷಣೆ ಮಾಡಿದೆ. ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಕೊಟ್ಟಿರೊ ಮೇ 10 ಡೆಡ್‌ಲೈನ್‌ ಮುಂಚೆಯೇ ಭಾರತ ಈ ಕ್ರಮ ಕೈಗೊಂಡಿದೆ ಅಂತ ಮುಯಿಝು ಅವ್ರ ಅಧ್ಯಕ್ಷೀಯ ಕಚೇರಿ ಮುಖ್ಯ ವಕ್ತಾರೆ ಹೀನಾ ವಲೀದ್‌ ಹೇಳಿದ್ದಾರೆ. ಜೊತೆಗೆ ʻಈ ಸೈನಿಕರ ಸಂಖ್ಯೆಯನ್ನ ಅಮೇಲೆ ಬಹಿರಂಗ ಮಾಡ್ತೀವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಮಾಲ್ಡೀವ್ಸ್‌ಗೆ ಭಾರತ ಗಿಫ್ಟ್‌ ಆಗಿ ನೀಡಿರೊ ಏರ್‌ಕ್ರಾಫ್ಟ್‌ ಮತ್ತು ಎರಡು ಹೆಲಿಕಾಪ್ಟರ್‌ಗಳನ್ನ ಆಪರೇಟ್‌ ಮಾಡಲು ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಇದ್ರು. ಅಲ್ದೇ ಸೋಮವಾರ ಮಾಲ್ಡೀವ್ಸ್‌ನಲ್ಲಿರೊ ಒಟ್ಟು 89 ಭಾರತೀಯ ಸೈನಿಕರ ಪೈಕಿ 51 ಸೈನಿಕರನ್ನ ಭಾರತಕ್ಕೆ ಕಳುಹಿಸಲಾಗಿದೆ ಅಂತ ಮಾಲ್ಡೀವ್ಸ್‌ ಹೇಳಿಕೆ ನೀಡಿತ್ತು. ಈಗ ಉಳಿದವರನ್ನ ಕಳಿಸಿದ್ದೇವೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply