ISI ಹನಿ ಟ್ರ್ಯಾಪ್‌ಗೆ ಸಿಕ್ಕಿಬಿದ್ದ ಭಾರತೀಯ! DRDO ಮಾಹಿತಿ ಲೀಕ್‌!

masthmagaa.com:

ಪಾಕಿಸ್ತಾನದ ಹನಿಟ್ರಾಪ್‌ಗೆ ಬಿದ್ದಿದ್ದ ಕಿರಾತಕನೊಬ್ಬನನ್ನ ಗುಜರಾತ್‌ನಲ್ಲಿ ಅರೆಸ್ಟ್‌ ಮಾಡಲಾಗಿದೆ. ಪ್ರವೀಣ್‌ ಮಿಶ್ರಾ ಅನ್ನೋ ಆರೋಪಿ DRDO ತಯಾರಿಸ್ತಿರೋ ಡ್ರೋನ್‌ಗಳ ಕುರಿತು ಈತ ಕೆಲ ಸೂಕ್ಷ್ಮ ಮಾಹಿತಿಗಳನ್ನ ನೀಡಿದ್ದಾನೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ISIನ ಹನಿ ಟ್ರ್ಯಾಪ್‌ಗೆ ಒಳಗಾಗಿದ್ದಾನೆ. ಈ ಬಗ್ಗೆ ಗುಜರಾತ್‌ನ ಕ್ರಿಮಿನಲ್‌ ಇನ್ವೆಸ್ಟಿಗೇಷನ್‌ ಡಿಪಾರ್ಟ್‌ಮೆಂಟ್‌ನ ADGP ರಾಜಕುಮಾರ್‌ ಪಾಂಡಿಯನ್‌ ಮಾಹಿತಿ ಹಂಚಿಕೊಂಡಿದ್ದಾರೆ. ʻಸೋನಲ್‌ ಗಾರ್ಗ್‌ ಅನ್ನೋ ಹೆಸರಿನಲ್ಲಿ ಪಾಕಿಸ್ತಾನದ ISI ಆಪರೇಟಿವ್‌, ತಾನು ಚಂಡೀಗಢದ IBMನಲ್ಲಿ ಕೆಲಸ ಮಾಡೋದಾಗಿ ಹೇಳಿ ಮಿಶ್ರಾನನ್ನ ನಂಬಿಸಿದ್ದ. ಆತ ರಚಿಸಿದ ಹನಿ ಟ್ರ್ಯಾಪ್‌ಗೆ ಪ್ರವೀಣ್ ಮಿಶ್ರಾ ಬಿದ್ದಿದ್ದಾನೆ. ಆ ಪಾಕಿಸ್ತಾನಿ ಆಪರೇಟಿವ್‌ ಭಾರತದ ವಾಟ್ಸ್ಯಾಪ್‌ ನಂಬರ್‌ ಹಾಗೂ ಫೇಕ್‌ ಫೇಸ್‌ಬುಕ್‌ ಐಡಿ ಮೂಲಕ ಬಂಧಿತ ಮಿಶ್ರಾನನ್ನ ಟಾರ್ಗೆಟ್‌ ಮಾಡಿದ್ದ ಅಂತ ಅಧಿಕಾರಿ ಹೇಳಿದ್ದಾರೆ. ಜೊತೆಗೆ ಈ ಪ್ರವಿಣ್‌ ಮಿಶ್ರಾ ಹೈದರಾಬಾದ್‌ನಲ್ಲಿರೋ ಸಂಸ್ಥೆಯೊಂದ್ರಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ. ಈ ಸಂಸ್ಥೆ DRDO ಜೊತೆ ಲಿಂಕ್‌ ಹೊಂದಿದೆ. ಅದಕ್ಕಾಗಿ ಕೆಲಸ ಮಾಡುತ್ತೆ. ಆದರೆ ಇದನ್ನೇ ಟಾರ್ಗೆಟ್‌ ಮಾಡ್ಕೊಂಡ ಪಾಕಿಸ್ತಾನಿ ಆಪರೇಟಿವ್‌ ಮಿಶ್ರಾರನ್ನ ನಂಬಿಸಿ….. ಭಾರತದ ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನ ಪಡೆದಿದ್ದಾನೆ ಅಂತ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಲೀಕ್‌ ಆಗಿರೋ ಮಾಹಿತಿಯಲ್ಲಿ….DRDO ತಯಾರಿಸಿದ ಡ್ರೋನ್‌ಗಳ ಇಂಪಾರ್ಟೆಂಟ್‌ ಮಾಹಿತಿಗಳೂ ಒಳಗೊಂಡಿದ್ವು ಅಂತ ಗೊತ್ತಾಗಿದೆ. ಜೊತೆಗೆ ಈ ಪಾಕಿಸ್ತಾನಿ ಆಪರೇಟಿವ್‌ ಸೋನಲ್‌ ಗಾರ್ಗ್‌ ಮ್ಯಾಲಿಶಿಯಸ್‌ ಸಾಫ್ಟ್‌ವೇರ್‌ಗಳನ್ನ ಪ್ರವೀಣ್‌ ಮಿಶ್ರಾರ ಆಫೀಸ್‌ ಸರ್ವರ್‌ಗೆ ಇನ್ಸ್ಟಾಲ್‌ ಮಾಡೋಕು ಟ್ರೈ ಮಾಡಿದ್ದ. ಆ ಎಲ್ಲಾ ಮಾಹಿತಿಗಳನ್ನ ಪಾಕಿಸ್ತಾನದಲ್ಲಿರೋ ISIಗೆ ಕಳಿಸಲಾಗ್ತಿತ್ತು ಅನ್ನೋದು ಈಗ ಬಯಲಾಗಿದೆ. ಅಲ್ದೆ ಕೇವಲ ಪ್ರವಿಣ್‌ ಮಿಶ್ರಾ ಮಾತ್ರವಲ್ಲ, ಈ ರೀತಿ ಭಾರತದ ರಕ್ಷಣೆಗೆ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಕೆಲಸ ಮಾಡೋ ಹಲವರನ್ನ ಕೂಡ ಟಾರ್ಗೆಟ್‌ ಮಾಡಿ ಈ ರೀತಿ ಮಾಡೋ ಪ್ರಯತ್ನ ನಡೀತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಸದ್ಯ IPC ಸೆಕ್ಷನ್‌ 123 ಮತ್ತು ಐಟಿ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಅಂತ ADGP ರಾಜಕುಮಾರ್‌ ಪಾಂಡಿಯನ್‌ ತಿಳಿಸಿದ್ದಾರೆ. ಅಂದ್ಹಾಗೆ ಈಗ ಸೇನೆಯಲ್ಲಿ ಕೆಲಸ ಮಾಡೋ ಹಾಗೂ ರಿಟಾಯರ್ಡ್‌ ಸೇನಾ ಪಡೆಗಳು, DRDO, ಹಿಂದೂಸ್ತಾನ್‌ ಏರೊನಾಟಿಕ್ಸ್‌ (HAL) ಮೇಲೆ ಟಾರ್ಗೆಟ್‌ ಮಾಡಲಾಗ್ತಿದೆ ಅಂತ ಉಧಂಪುರ್‌ನ ಮಿಲಿಟರಿ ಇಂಟೆಲಿಜೆನ್ಸ್‌ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ CID ತನಿಖೆ ಶುರು ಮಾಡಿತ್ತು. ಈ ವೇಳೆ ಪ್ರವಿಣ್‌ ಮಿಶ್ರಾರ ಹನಿಟ್ರ್ಯಾಪ್‌ ಸ್ಟೋರಿ ಬೆಳಕಿಗೆ ಬಂದಿದೆ.

-masthmagaa.com

Contact Us for Advertisement

Leave a Reply