ಭಾರತದ ಪ್ರಜಾಪ್ರಭುತ್ವ ಹೊಗಳಿದ ಅಮೆರಿಕದ ರಾಯಭಾರಿ ಎರಿಕ್‌!

masthmagaa.com:

ಭಾರತದ ಪ್ರಜಾಪ್ರಭುತ್ವ ಬಗ್ಗೆ ಟೀಕಿಸಿ… ಅಮೆರಿಕದ ಪ್ರಮುಖ ದಿನಪತ್ರಿಕೆಗಳು ಬ್ಯಾಕ್‌ ಟು ಬ್ಯಾಕ್‌ ವರದಿ ಮಾಡಿದ್ದು ನಿಮಗೆ ಗೊತ್ತೇ ಇದೆ. ಇದಕ್ಕೆ ಭಾರತ ಕೂಡ ತಕ್ಕ ತಿರುಗೇಟು ಕೊಟ್ಟಿತ್ತು. ಈ ವಿಚಾರವಾಗಿ ಈಗ ಅಮೆರಿಕ ತೇಪೆ ಹಾಕೋ ಕೆಲಸ ಮಾಡಿದೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹಾಡಿ ಹೊಗಳಿದೆ. ಭಾರತದಲ್ಲಿರೋ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿಯವ್ರು ಮಾತಾಡಿ, ʻ ಭಾರತದಲ್ಲಿ ಪ್ರಜಾಪ್ರಭುತ್ವ ತುಂಬಾ ಚೆನ್ನಾಗಿದೆ. ಕೆಲವೊಂದು ವಿಚಾರಗಳಲ್ಲಿ ಅಮೆರಿಕಕ್ಕಿಂತ ಬೆಟರ್‌ ಇದೆ ಅಂತೇಳಿದ್ದಾರೆ… ಜೊತೆಗೆ ಮುಂದಿನ 10 ವರ್ಷಗಳ ನಂತ್ರ ಭಾರತ ಇನ್ನೂ ಚೆನ್ನಾಗಿ ಅಂದ್ರೆ ವೈಬ್ರೆಂಟ್‌ ಡೆಮಾಕ್ರಸಿಯಾಗಲಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಕೆಲವೊಂದು ವಿಚಾರ ಸರಿ ಇಲ್ಲದಿದ್ರೂ… ಕೆಲವು ಸಿಸ್ಟಮ್‌ಗಳು ಬಹಳ ಚೆನ್ನಾಗಿದೆ. ಭಾರತದಲ್ಲಿ ವೋಟ್‌ ಮಾಡೋದಕ್ಕೆ ದೂರ ಪ್ರಯಾಣ ಮಾಡಬೇಕಂತಿಲ್ಲ. ನೀವಿರೋ 2ಕಿಮೀ ದೂರದಲ್ಲೇ ಮತಗಟ್ಟೆ ಬರುತ್ತೆ…ಆರಾಮಾಗಿ ಮತ ಚಲಾಯಿಸ್ಬೋದು. ಅಂಥದೊಂದು ಕಾನೂನು ಭಾರತದಲ್ಲಿದೆ. ಯಾವ್ದೋ ಒಂದು ಬೆಟ್ಟದ ಮೇಲಿರೋ ಸಂತನ ವೋಟ್‌ ಪಡೆಯೋಕೂ ಬೆಟ್ಟಗುಡ್ಡಗಳನ್ನ ಹತ್ತಿ ವೋಟಿಂಗ್‌ ಮಷೀನ್‌ ಇರಿಸಲಾಗುತ್ತೆ . ಚುನಾವಣೆ ವೇಳೆ ಹಣ ಹರಿವು ನಿಲ್ಲಿಸೋಕೆ ಪ್ರತೀ ಟ್ರಕ್‌ಗಳನ್ನ ಕೂಡ ಚೆಕ್‌ ಮಾಡಲಾಗುತ್ತೆ. ಸೋ ಈ ವಿಚಾರದಲ್ಲಿ ಭಾರತ ನಮ್ಮ ಅಮೆರಿಕಕ್ಕಿಂತ ಎಷ್ಟೋ ಬೆಟರ್‌ ಇದೆ. ಭಾರತದಲ್ಲಿ ಎಲ್ಲರ ಹಕ್ಕುಗಳಿಗೆ ಗೌರವ ನೀಡಲಾಗುತ್ತೆ. ಕೇಂದ್ರ ಸರ್ಕಾರದಷ್ಟೇ ಪವರ್‌ನ್ನ ಅಲ್ಲಿನ ವಿಪಕ್ಷದ ಆಡಳಿತದ ರಾಜ್ಯ ಸರ್ಕಾರಗಳು ಕೂಡ ಹೊಂದಿವೆ. ಒಂದು ಪಕ್ಷ ಮತ್ತೊಂದು ಪಕ್ಷಕ್ಕೆ ಎಲ್ಲಾ ರೀತಿ ಟೀಕೆಗಳನ್ನ ಮಾಡೋ ಹಕ್ಕು ಅವರಿಗೆ ಇದೆʼ ಅಂತ ಗಾರ್ಸೆಟ್ಟಿ ಹೇಳಿದ್ದಾರೆ. ಈ ಮೂಲಕ ಭಾರತದ ವಿರುದ್ದ, ಇಲ್ಲಿನ ಪ್ರಜಾಪ್ರಭುತ್ವದ ವಿರುದ್ದ ಟೀಕೆ ಮಾಡ್ತಿದ್ದ ಎಲ್ರಿಗೂ ಅಮೆರಿಕ ರಾಯಭಾರಿ ಛೀಮಾರಿ ಹಾಕಿದ್ದಾರೆ.

ಇನ್ನೊಂದು ಕಡೆ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡ್ತಿದೆ ಅನ್ನೊ ಬಗ್ಗೆ ರಷ್ಯಾ ಗಂಭೀರ ಆರೋಪ ಮಾಡಿತ್ತು. ಆದ್ರೆ ಇದನ್ನ ಈಗ ಅಮೆರಿಕ ತಳ್ಳಿಹಾಕಿದೆ. ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಈ ಬಗ್ಗೆ ಮಾತಾಡಿದ್ದು, ʻʻಭಾರತದ ಚುನಾವಣೆಯಲ್ಲಿ ನಾವು ಇಂಟರ್‌ಫಿಯರ್‌ ಆಗ್ತಿಲ್ಲ. ಭಾರತ ಅಂತಲ್ಲ… ಜಗತ್ತಿನ ಯಾವ ದೇಶಗಳ ಎಲೆಕ್ಷನ್‌ಗಳಲ್ಲೂ ಅಮೆರಿಕ ಭಾಗಿಯಾಗಿಲ್ಲ.. ಸಧ್ಯ ಅದು ಭಾರತೀಯರೆ ತೆಗೆದುಕೊಳ್ಳಬೇಕಾದ ನಿರ್ಧಾರ, ಅದು ಅವರ ಆಂತರಿಕ ವಿಚಾರ..

-masthmagaa.com

Contact Us for Advertisement

Leave a Reply