ಚೀನಾ-ಅಮೆರಿಕ ಮುಖಾಮುಖಿ! ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆಗೆ ಕಳವಳ!

masthmagaa.com:

ರಷ್ಯಾದ ಮಿಲಿಟರಿಗೆ ಭಾರೀ ಶಸ್ತ್ರಾಸ್ತ್ರ ಪೂರೈಕೆ ಮಾಡ್ತಿರೋ ಚೀನಾವನ್ನ ಅಮೆರಿಕ, ಅದರ ನೆಲದಲ್ಲೇ ತರಾಟೆಗೆ ತಗೊಂಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಚೀನಾಗೆ ಭೇಟಿ ನೀಡಿ ಅಲ್ಲಿನ ವಿದೇಶಾಂಗ ಸಚಿವ ವಾಂಗ್‌ ಯಿ ಅವ್ರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬ್ಲಿಂಕನ್‌, ರಷ್ಯಾ ಯುದ್ಧಸಾಮಾಗ್ರಿಗೆ ಮುಖ್ಯವಾಗಿ ಬೇಕಾದ ಮಷಿನ್‌ ಟೂಲ್ಸ್‌, ಮೈಕ್ರೋಎಲೆಕ್ಟ್ರಾನಿಕ್ಸ್‌, ನೈಟ್ರೋಸೆಲ್ಲುಲೋಸ್‌ ಪೂರೈಕೆ ಮಾಡೋದ್ರಲ್ಲಿ, ಹಾಗೆ ಸಿವಿಲಿಯನ್‌ ಮತ್ತು ಮಿಲಿಟರಿ ಎರಡಕ್ಕೂ ಬಳಕೆಯಾಗೋ ಡುಯಲ್‌ ಯೂಸ್‌ ಐಟಂಗಳನ್ನ ಕೊಡೋದ್ರಲ್ಲಿ ಚೀನಾ ಟಾಪ್‌ಲ್ಲಿದೆ… ಇದ್ರಿಂದ ಯುಕ್ರೇನ್‌ಗೆ ಭಾರಿ ಹೊಡೆತ ಬೀಳ್ತಿದೆ. ಹಾಗೂ ಚೀನಾದ ಸಹಾಯದಿಂದ ರಷ್ಯಾ ಯುರೋಪಿಯನ್‌ ರಾಷ್ಟ್ರಗಳಿಗೆ ಅಪಾಯವಾಗ್ಬಿಟ್ಟಿದೆ. ಈ ಕಳವಳಗಳನ್ನ ನಾನು ಚೀನಾಗೆ ತಿಳಿಸಿದ್ದೇನೆ ಅಂದಿದ್ದಾರೆ. ಅದಕ್ಕೆ ಚೀನಾ, ʻಯುಕ್ರೇನ್‌ ವಿರುದ್ಧದ ಯುದ್ಧದಲ್ಲಿ ನಾವು ರಷ್ಯಾಗೆ ಯಾವ್ದೇ ರೀತಿ ಶಸ್ತ್ರಾಸ್ತ್ರ ಪೂರೈಕೆ ಮಾಡ್ತಿಲ್ಲ. ಯಾವೊಂದು ನಮ್ಮ ಪಾರ್ಟನರ್‌ಗಳಿಗೆ ನಾವು ಶಸ್ತ್ರಾಸ್ತ್ರ ನೀಡ್ತಿಲ್ಲʼ ಅಂತ ಹೇಳ್ಕೊಂಡಿದೆ.

-masthmagaa.com

Contact Us for Advertisement

Leave a Reply