ಕಿಡ್ನ್ಯಾಪ್‌ ಕೇಸ್‌ನಲ್ಲಿ ರೇವ‍ಣ್ಣಗೆ ಹಿನ್ನಡೆ: ಮೇ13ಕ್ಕೆ ವಿಚಾರಣೆ!

masthamagaa.com:

ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರೋ ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಮತ್ತಷ್ಟು ಬೆಳವಣಿಗೆಯಾಗಿದೆ. ಕಿಡ್ಯಾಪ್‌ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರೊ ಶಾಸಕ ಎಚ್‌.ಡಿ.ರೇವಣ್ಣ ಅವ್ರಿಗೆ ಮತ್ತೆ ಹಿನ್ನಡೆಯಾಗಿದೆ. ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ಮುಂದೂಡಿದೆ. ಸೋಮವಾರ ಅಂದ್ರೆ ಮೇ13ಕ್ಕೆ ಈ ಅರ್ಜಿಯ ಮುಂದಿನ ವಿಚಾರಣೆ ನಡೆಸಲಾಗುವುದು ಅಂತ ಕೋರ್ಟ್‌ ಹೇಳಿದೆ. ಈ ಮೂಲಕ ರೇವಣ್ಣ ಮತ್ತೆ ಜೈಲುಪಾಲಾಗಿದ್ದಾರೆ. ಇನ್ನು ಜೈಲಲ್ಲಿರೋ ಎಚ್.ಡಿ.ರೇವಣ್ಣರ ಆರೋಗ್ಯ ತೀವ್ರ ಹದಗೆಡ್ತಿದೆ ಅನ್ನೊ ವಿಚಾರವೂ ಓಡಾಡ್ತಿದೆ. ಜೈಲು ಅಧಿಕಾರಿಗಳ ಬಳಿ 3-4 ಬಾರಿ ಹೊಟ್ಟೆ ನೋವು ಅಂತ ರೇವಣ್ಣ ತಿಳಿಸಿದ್ರಂತೆ. ಹೀಗಾಗಿ ಜೈಲು ಆಸ್ಪತ್ರೆ ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಮತ್ತೊಂದೆಡೆ ಪೆನ್‌ಡ್ರೈವ್‌ ಕೇಸ್‌ನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಅಂದ್ರೆ ಕೇಂದ್ರ ಸರ್ಕಾರದ ಅಂಡರ್‌ನಲ್ಲಿ ಬರೋ ಆಯೋಗ, ಸ್ಪೋಟಕ ಆರೋಪ ಮಾಡಿದೆ. ಪ್ರಜ್ವಲ್‌ ವಿರುದ್ದ ಸುಳ್ಳು ದೂರು ನೀಡಲು ಒತ್ತಡ ಕೇಳಿ ಬರ್ತಿದೆ, ಮಹಿಳೆಯರಿಗೆ ದೂರು ನೀಡುವಂತೆ ಒತ್ತಡ ಹೇರಲಾಗ್ತಿದೆ ಅಂತ ಪ್ರಕಟಣೆ ಹೊರಡಿಸಿದೆ. ಅತ್ತ ಸಂಸದ ಪ್ರಜ್ವಲ್​ ರೇವಣ್ಣರ ಪ್ರಕರಣದ ವಿಚಾರವಾಗಿ ರಾಜ್ಯಪಾಲರನ್ನ ಭೇಟಿ ಮಾಡಿ ಜೆಡಿಎಸ್ ನಿಯೋಗ ದೂರು ನೀಡಿದೆ. ಮಾಜಿ ಸಿಎಂ HD ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿಯಾದ ನಿಯೋಗ, SIT ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಅಂತೇಳಿದೆ. ಇನ್ನು ಪೆನ್ ಡ್ರೈವ್ ಲೀಕ್ ಕೇಸ್ ಗೆ ಸಂಬಂಧಿಸಿದಂತೆ ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿನಲ್ಲಿ ದೂರು ದಾಖಲಾಗಿದೆ. ದೇವರಾಜೇಗೌಡ, ಆಡಿಯೋ ಮತ್ತು ಪೋಟೊಗಳನ್ನ ಕಕ್ಷಿದಾರರದ್ದು ಅಂತ ಬಿಡುಗಡೆ ಮಾಡಿದ್ದಾರೆ. ಇದು ವಕೀಲರ ವೃತ್ತಿ ನಿಯಮಾನುಸಾರ ಭಾರತೀಯ ಅಧಿಸಾಕ್ಷಿ ಕಲಂ 126ಅಡಿ ಉಲ್ಲಂಘನೆ‌‌ ಅಂತ ಆರೋಪಿಸಿ ಈ ದೂರು ದಾಖಲಾಗಿದೆ. ಮತ್ತೊಂದು ಕಡೆ ಈ ಕೇಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಕೈವಾಡವಿದೆ ಅಂತ ಆರೋಪಿಸಿ ಜೆಡಿಎಸ್‌ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಸಿಎಂ-ಡಿಸಿಎಂ ವಿರುದ್ಧ ಮಂಡ್ಯ, ಮೈಸೂರು, ರಾಮನಗರ, ದೇವನಹಳ್ಳಿ, ಹುಬ್ಬಳ್ಳಿ, ಗದಗದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇತ್ತ ಮೈಸೂರಿನಲ್ಲಿ ಡಿಸಿ ಕಚೇರಿ ಮುಂಭಾಗ ಜಿ.ಟಿ. ದೇವೇಗೌಡ ಹಾಗೂ ಸಾರಾ ಮಹೇಶ್ ಪ್ರತಿಭಟನೆ ಮಾಡಿದ್ರು. ಈ ವೇಳೆ, GT ದೇವೇಗೌಡ ಅಂದ್ರೆ ಜೆಡಿಎಸ್‌ನ ಕೋರ್‌ ಕಮಿಟಿ ಅಧ್ಯಕ್ಷ ಒಂದಷ್ಟು ಇಂಟ್ರಸ್ಟಿಂಗ್‌ ವಿಚಾರಗಳನ್ನ ಹೇಳಿದ್ದಾರೆ , ʻಪೆನ್‌ಡ್ರೈವ್‌ ಹಂಚಿಕೆ ಮಾಡಲು ಚೆನ್ನೈನ ಕಂಪನಿಯೊಂದರಲ್ಲಿ 3 ಕೋಟಿ ರೂ.ಗೆ ಪೆನ್‌ಡ್ರೈವ್‌ ಖರೀದಿಸಿದ್ದಾರೆ. ಆಸ್ಟ್ರೇಲಿಯಾದ ಲ್ಯಾಬ್‌ನಲ್ಲಿ ಇದನ್ನ ಎಡಿಟ್‌ ಮಾಡಿಸಿದ್ದಾರೆ. ಯಾವುದನ್ನ ಸೇರಿಸಬೇಕು ಅದನ್ನ ಮಾತ್ರ ಸೇರಿಸಿ ಸಿನಿಮಾ ಮಾಡಿದಂತೆ ಮಾಡಿ ಅಲ್ಲಿಂದ ರಿಲೀಸ್‌ ಮಾಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಜಾಲ ಸೇರ್ಕೊಂಡಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ‌ಮತ್ತೊಂದೆಡೆ ಈ ಕೇಸ್‌ ವಿಚಾರವಾಗಿ ಪ್ರಜ್ವಲ್‌ ಬಳಿಕ ಎಚ್.ಡಿ. ರೇವಣ್ಣ ಅವ್ರನ್ನೂ ಜೆಡಿಎಸ್‌ನಿಂದ ಅಮಾನತು ಮಾಡ್ಬೇಕು ಅಂತ ಕೆಲ ಸ್ವಪಕ್ಷದ ನಾಯಕರು ಒತ್ತಾಯ ಮಾಡ್ತಿದ್ದಾರೆ ಅನ್ನೊ ಮಾಹಿತಿ ಲಭ್ಯ ಆಗಿದೆ. ಆದ್ರೆ ಇದುವರೆಗೂ ಯಾವ ನಾಯಕರು ಓಪನ್‌ ಆಗಿ ಮಾತಾಡಿಲ್ಲ.

-masthmagaa.com

Contact Us for Advertisement

Leave a Reply