ಭಾರತ ಜೊತೆ ರಕ್ಷಣಾ ಸಂಬಂಧ ಬಲಪಡಿಸಲು ಜರ್ಮನಿ ಸಜ್ಜು!

masthmagaa.com:

ಭಾರತ ಜೊತೆಗಿನ ದ್ವಿಪಕ್ಷೀಯ ರಕ್ಷಣಾ ಒಪ್ಪಂದ ಇನ್ನಷ್ಟು ಬಲಪಡಿಸೋಕೆ ಇದೀಗ ಜರ್ಮನಿ ತನ್ನ ಪಾಲಿಸಿಗಳಲ್ಲಿ ಬದಲಾವಣೆ ಮಾಡ್ಕೊಂಡಿದೆ. ಭಾರತಕ್ಕೆ ಶಸ್ತ್ರಾಸ್ತ್ರಗಳ ಸಪ್ಲೈ ಮಾಡೋದನ್ನ ಇನ್ನಷ್ಟು ಸರಳಗೊಳಿಸಿದೆ. ಭಾರತಕ್ಕೆ ಜರ್ಮನಿಯಿಂದ ಮಾರಾಟವಾಗ್ತಿದ್ದ ಚಿಕ್ಕಪುಟ್ಟ ಶಸ್ತ್ರಾಸ್ತ್ರಗಳು ಮತ್ತು ಸ್ಪೇರ್‌ ಪಾರ್ಟ್ಸ್‌ಗಳ ಮೇಲಿದ್ದ ನಿರ್ಬಂಧಗಳನ್ನ ತೆಗೆಯಲಾಗ್ತಿದೆ. ಹಾಗೂ ಭಾರತಕ್ಕೆ ಸೇನಾ ಸಂಬಂಧ ಮಾರಾಟದ ಲೈಸೆನ್ಸ್‌ ವ್ಯವಸ್ಥೆಯನ್ನ ಇನ್ನಷ್ಟು ಈಸಿ ಮಾಡ್ತಿದೆ. ಇದಕ್ಕೆ ಪುಷ್ಟಿ ನೀಡೋ ಹಾಗೇ, ಇತ್ತೀಚೆಗಷ್ಟೇ ಭಾರತದ NSG ಅಥವಾ ʻಬ್ಲಾಕ್‌ ಕ್ಯಾಟ್‌ ಕಮಾಂಡೋಸ್‌ʼ ತಮ್ಮ MP5 ಸಬ್‌ಮಷೀನ್‌ ಗನ್‌ಗಳಿಗೆ ಸ್ಪೇರ್‌ ಪಾರ್ಟ್ಸ್‌ ಒದಗಿಸೋಕೆ ಜರ್ಮನಿ ಬಳಿ ಮನವಿ ಮಾಡ್ಕೊಂಡಿತ್ತು. ಇದಕ್ಕೆ ಜರ್ಮನಿ ಸರ್ಕಾರ ತಟ್ಟಂತ ಒಪ್ಪಿಗೆ ನೀಡಿತ್ತು. ಈ ಮೂಲಕ ಜರ್ಮನಿ ತನ್ನ ಪಾಲಿಸಿಯಲ್ಲಿ ಬದಲಾವಣೆ ಮಾಡ್ಕೊಂಡಿರೋದು ಗೊತ್ತಾಗಿದೆ. ಯಾಕಂದ್ರೆ ಈ ಮುಂಚೆ ಇಂತಹ ಸಣ್ಣಪುಟ್ಟ ಶಸ್ತ್ರಾಸ್ತ್ರಗಳನ್ನ ನ್ಯಾಟೋಗೆ ಸೇರದ ದೇಶಗಳಿಗೆ ರಫ್ತು ಮಾಡೋಕೆ ಕಠಿಣ ನಿರ್ಬಂಧಗಳಿದ್ವು. ಆದ್ರೆ ಇದೀಗ ಆ ಎಲ್ಲಾ ನಿರ್ಬಂಧಗಳನ್ನ ಜರ್ಮನಿ ಒಡೆದು…. ಭಾರತ ಪರವಾಗಿ ತನ್ನ ಪಾಲಿಸಿ ಬದಲಾಯಿಸಿರೋದು ಕ್ಲಿಯರ್‌ ಆಗಿದೆ. ಇತ್ತೀಚೆಗೆ ಜರ್ಮನಿ ಭಾರತದ ಜೊತೆಗೆ ಡಿಫೆನ್ಸ್‌ ಸಂಬಂಧವನ್ನ ಹೆಚ್ಚು ಮಾಡೋಕೆ ನೋಡ್ತಿದೆ. ಶಸ್ತ್ರಾಸ್ತ್ರ ಮಾರಾಟ, ಜಂಟಿಯಾಗಿ ಅಡ್ವಾನ್ಸ್ಡ್‌ ಮಿಲಿಟರಿ ಹಾರ್ಡ್‌ವೇರ್‌ಗಳನ್ನ ಉತ್ಪಾದಿಸೋದು, ಸೇರಿದಂತೆ ಹಲವಾರು ವಿಚಾರದಲ್ಲಿ ಆಸಕ್ತಿ ತೋರಿಸ್ತಿದೆ. ಈ ರೀತಿ ಕ್ವಾಲಿಟಿ ಫೈರ್‌ಆರ್ಮ್ಸ್‌ನ ಉತ್ಪಾದಿಸೋದ್ರಲ್ಲಿ ಜರ್ಮನಿಗೆ ಒಳ್ಳೇ ಹೆಸರಿದೆ. ಹೀಗಾಗಿ ಜರ್ಮನಿಯ ಈ ನಡೆ ಭಾರತಕ್ಕೆ ಒಳ್ಳೇದು. ಈಗ ನಮ್ಮ ಭದ್ರತಾ ಪಡೆಗಳು, ಪ್ಯಾರಾಮಿಲಿಟರಿಗೆ ಒಳ್ಳೊಳ್ಳೆ ಜರ್ಮನ್‌ ಮೇಡ್‌ ರೈಫಲ್ಸ್‌, ಪಿಸ್ಟೋಲ್ಸ್‌ ಅಲ್ಲದೇ ಅವುಗಳ ಬಿಡಿಬಾಗಗಳು ಈಸಿಯಾಗಿ ಸಿಗುತ್ತೆ.

-masthmagaa.com

Contact Us for Advertisement

Leave a Reply