AAP ಸರ್ಕಾರವನ್ನ ದುರಹಂಕಾರಿ ಅಂತ ಕರೆದ ದಿಲ್ಲಿ ಹೈಕೋರ್ಟ್‌!

masthmagaa.com:

ಏನಾದ್ರು ಪರ್ವಾಗಿಲ್ಲ ರಾಜೀನಾಮೆ ಕೊಡಲ್ಲ ಜೈಲಿಂದಲೇ ಸರ್ಕಾರ ನಡೆಸ್ತೀನಿ ಅಂದಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ ಅವ್ರಿಗೆ ಒಂದೊಂದೇ ತೊಡಕುಗಳು ಎದುರಾಗೋಕೆ ಶುರುವಾಗಿವೆ. ಇದೀಗ ದಿಲ್ಲಿಯ ಮಕ್ಕಳಿಗೆ ಟೆಕ್ಸ್ಟ್‌ಬುಕ್‌, ಸ್ಟೇಷನರಿ ವಸ್ತುಗಳನ್ನ ಕೊಟ್ಟಿಲ್ಲ ಅಂತ ದಿಲ್ಲಿ ಹೈಕೋರ್ಟ್‌ ಆಪ್‌ ಸರ್ಕಾರವನ್ನ ತರಾಟೆಗೆ ತಗೊಂಡಿದೆ. ಇವುಗಳನ್ನೆಲ್ಲ ಪೂರೈಸೋ ಕಾಂಟ್ರಾಕ್ಟ್‌ಗೆ ಸ್ಥಾಯಿ ಸಮಿತಿ ಅನುಮತಿ ಕೊಡ್ಬೇಕು. ಆದ್ರೆ ಸಿಎಂ ಜೈಲಿನಲ್ಲಿರೋದ್ರಿಂದ ಸ್ಥಾಯಿ ಸಮಿತಿ ರಚಿಸಿಲ್ಲ ಅಂತ MCD ಕಮಿಷನರ್‌ ಹೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ದಿಲ್ಲಿ ಕೋರ್ಟ್‌, ನಿಮಗೆ ರಾಷ್ಟ್ರೀಯ ಹಿತಾಸಕ್ತಿಗಿಂತ ವೈಯಕ್ತಿಕ ಆಸಕ್ತಿಯೇ ಜಾಸ್ತಿಯಾಗಿದೆ. ʻಇದು ದುರಹಂಕಾರದ ಪರಮಾವಧಿʼ ಅಂತ ಕರೆದಿದೆ. ಇನ್ನು ಕಂಬಿಗಳ ಹಿಂದಿರೋ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರ ಆರೋಗ್ಯವನ್ನ ಏಮ್ಸ್‌ ಆಸ್ಪತ್ರೆಯ 5 ವೈದ್ಯರು ಸೇರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪರಿಶೀಲಿಸಿದ್ದಾರೆ. ಸದ್ಯ ಕೇಜ್ರಿವಾಲ್‌ ತಗೊಳ್ತಿರೋ ಮೆಡಿಸಿನ್‌ ಮತ್ತು ಎರಡು ಯುನಿಟ್‌ ಇನ್ಸುಲಿನ್‌ ತಗೋಳೋದನ್ನ ಕಂಟಿನ್ಯೂ ಮಾಡೋಕೆ ನಿರ್ದೇಶಿಸಿದ್ದಾರೆ.

-masthmagaa.com

Contact Us for Advertisement

Leave a Reply