ಹುಬ್ಬಳ್ಳಿ ನೇಹಾ ಕೇಸ್:‌ ಫಯಾಜ್‌ DNA ಟೆಸ್ಟ್‌ ನಡೆಸಿದ CID ತಂಡ!

masthmagaa.com:

ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್‌ನಲ್ಲಿ ಒಂದಷ್ಟು ಬೆಳವಣಿಗೆಯಾಗಿದೆ. ಪ್ರಕರಣದ ಆರೋಪಿ ಫಯಾಜ್‌ನ ಡಿಎನ್‌ಎ ಪರೀಕ್ಷೆಗಾಗಿ ನ್ಯಾಯಾಧೀಶರ ಮುಂದೆನೇ ಸಿಐಡಿ ಅಧಿಕಾರಿಗಳು ವೈದ್ಯರ ಸಹಾಯದಿಂದ ಆತನ ರಕ್ತದ ಮಾದರಿಯನ್ನ ಸಂಗ್ರಹಿಸಿದ್ದಾರೆ. ಅಂದ್ಹಾಗೆ ಹತ್ಯೆ ನಡೆದ ಸ್ಥಳದಲ್ಲಿ ಹಾಗೂ ಆರೋಪಿ ಕೃತ್ಯಕ್ಕೆ ಬಳಸಿದ ಚಾಕುವಿನ ಮೇಲೆ ರಕ್ತದ ಎರಡು ಗುಂಪಿನ ಮಾದರಿ ಪತ್ತೆಯಾಗಿದ್ವು. ಹೀಗಾಗಿ ಈಗ ಫಯಾಜ್‌ನ DNA ಟೆಸ್ಟ್‌ ನಡೆಸಲಾಗ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply