masthmagaa.com:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಕೆಲ ದಿನಗಳಿಂದ ದಿನೇದಿನೆ ಹೆಚ್ಚಾಗ್ತಾನೇ ಇದೆ. ಒಂದು ಲೀಟರ್ ಪೆಟ್ರೋಲ್ಗೆ ಹತ್ರತ್ರ ನೂರು ರೂಪಾಯಿ ಆಗ್ತಿದೆ. ಬೆಂಗಳೂರಿನಲ್ಲಿ ಇವತ್ತು ಪೆಟ್ರೋಲ್ ರೇಟ್ 70 ಪೈಸೆ ಜಾಸ್ತಿಯಾಗಿ 90.53 ಆಗಿದೆ, ಡೀಸೆಲ್ ರೇಟ್ 82.40 ರೂಪಾಯಿ ಇದೆ. ಪೆಟ್ರೋಲ್, ಡೀಸೆಲ್ ರೇಟು ಹೆಚ್ಚಾಗ್ತಿರೋ ಬಗ್ಗೆ ವಿಪಕ್ಷಗಳು ಇವತ್ತು ಸಂಸತ್ನಲ್ಲಿ ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದ್ವು. ಅದ್ರಲ್ಲೂ ಸಮಾಜವಾದಿ ಪಕ್ಷದ ಸಂಸದ ವಿಶಾಂಭರ್ ಪ್ರಸಾದ್ ನಿಶಾದ್ ಕೇಳಿದ್ದು ಚೆನ್ನಾಗಿತ್ತು.. ಸೀತೆಯ ನೇಪಾಳದಲ್ಲಿ ಮತ್ತು ರಾವಣನ ಲಂಕಾದಲ್ಲಿ ಪೆಟ್ರೋಲ್ ರೇಟು ಕಮ್ಮಿ ಇದೆ. ಹಾಗಾದ್ರೆ ಶ್ರೀರಾಮನ ಈ ದೇಶದಲ್ಲಿ ಸರ್ಕಾರ ಪೆಟ್ರೋಲ್ ರೇಟನ್ನ ಕಮ್ಮಿ ಮಾಡುತ್ತಾ ಅಂತ ಕೇಳಿದ್ರು. ಸಾಮಾಜಿಕ ಜಾಲತಾಣಗಳಲ್ಲೂ ಇದೇ ರೀತಿ ಕೇಂದ್ರ ಸರ್ಕಾರದ ಕಾಲೆಳೆಯಲಾಗ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್ ರೇಟನ್ನ ಹೀಗೆ ಕಾಂಪೇರ್ ಮಾಡಿ ಹೇಳೋದು ಸರಿಯಲ್ಲ. ಹೆಚ್ಚು ಪೆಟ್ರೋಲ್ ಯೂಸ್ ಮಾಡೋ ಭಾರತವನ್ನ ಕಮ್ಮಿ ಪೆಟ್ರೋಲ್ ಯೂಸ್ ಮಾಡೋ ದೇಶಕ್ಕೆ ಹೋಲಿಸೋದು ಸೂಕ್ತವಲ್ಲ. ಆ ದೇಶಗಳಲ್ಲಿ ಹೆಚ್ಚು ಜನ ಬಳಸೋ ವಸ್ತುಗಳ ರೇಟು ಜಾಸ್ತಿಯೇ ಇದೆ. ಬಾಂಗ್ಲಾದೇಶದಲ್ಲಿ ಒಂದು ಲೀಟರ್ ಸೀಮೆ ಎಣ್ಣೆಗೆ 57 ರೂಪಾಯಿ ಇದೆ. ಅದೇ ರೀತಿ ನೇಪಾಳದಲ್ಲಿ 59 ರೂಪಾಯಿ ಇದೆ. ಭಾರತದಲ್ಲಿ 32 ರೂಪಾಯಿ ಮಾತ್ರ ಅಂದ್ರು.
-masthmagaa.com
Contact Us for Advertisement