ಭಾರತದಲ್ಲಿ ಪೆಟ್ರೋಲ್ ರೇಟು ಯಾಕೆ ಜಾಸ್ತಿ? ಕೇಂದ್ರ ಸರ್ಕಾರ ಕೊಟ್ಟ ಉತ್ತರ ಇಲ್ಲಿದೆ

masthmagaa.com:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಕೆಲ ದಿನಗಳಿಂದ ದಿನೇದಿನೆ ಹೆಚ್ಚಾಗ್ತಾನೇ ಇದೆ. ಒಂದು ಲೀಟರ್​ ಪೆಟ್ರೋಲ್​ಗೆ ಹತ್ರತ್ರ ನೂರು ರೂಪಾಯಿ ಆಗ್ತಿದೆ. ಬೆಂಗಳೂರಿನಲ್ಲಿ ಇವತ್ತು ಪೆಟ್ರೋಲ್​ ರೇಟ್ 70 ಪೈಸೆ ಜಾಸ್ತಿಯಾಗಿ​ 90.53 ಆಗಿದೆ, ಡೀಸೆಲ್ ರೇಟ್ 82.40 ರೂಪಾಯಿ ಇದೆ. ಪೆಟ್ರೋಲ್​, ಡೀಸೆಲ್​ ರೇಟು ಹೆಚ್ಚಾಗ್ತಿರೋ ಬಗ್ಗೆ ವಿಪಕ್ಷಗಳು ಇವತ್ತು ಸಂಸತ್​ನಲ್ಲಿ ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದ್ವು. ಅದ್ರಲ್ಲೂ ಸಮಾಜವಾದಿ ಪಕ್ಷದ ಸಂಸದ ವಿಶಾಂಭರ್ ಪ್ರಸಾದ್​ ನಿಶಾದ್ ಕೇಳಿದ್ದು ಚೆನ್ನಾಗಿತ್ತು.. ಸೀತೆಯ ನೇಪಾಳದಲ್ಲಿ ಮತ್ತು ರಾವಣನ ಲಂಕಾದಲ್ಲಿ ಪೆಟ್ರೋಲ್​ ರೇಟು ಕಮ್ಮಿ ಇದೆ. ಹಾಗಾದ್ರೆ ಶ್ರೀರಾಮನ ಈ ದೇಶದಲ್ಲಿ ಸರ್ಕಾರ ಪೆಟ್ರೋಲ್​​ ರೇಟನ್ನ ಕಮ್ಮಿ ಮಾಡುತ್ತಾ ಅಂತ ಕೇಳಿದ್ರು. ಸಾಮಾಜಿಕ ಜಾಲತಾಣಗಳಲ್ಲೂ ಇದೇ ರೀತಿ ಕೇಂದ್ರ ಸರ್ಕಾರದ ಕಾಲೆಳೆಯಲಾಗ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್​ ರೇಟನ್ನ ಹೀಗೆ ಕಾಂಪೇರ್ ಮಾಡಿ ಹೇಳೋದು ಸರಿಯಲ್ಲ. ಹೆಚ್ಚು ಪೆಟ್ರೋಲ್​ ಯೂಸ್​ ಮಾಡೋ ಭಾರತವನ್ನ ಕಮ್ಮಿ ಪೆಟ್ರೋಲ್​ ಯೂಸ್​ ಮಾಡೋ ದೇಶಕ್ಕೆ ಹೋಲಿಸೋದು ಸೂಕ್ತವಲ್ಲ. ಆ ದೇಶಗಳಲ್ಲಿ ಹೆಚ್ಚು ಜನ ಬಳಸೋ ವಸ್ತುಗಳ ರೇಟು ಜಾಸ್ತಿಯೇ ಇದೆ. ಬಾಂಗ್ಲಾದೇಶದಲ್ಲಿ ಒಂದು ಲೀಟರ್ ಸೀಮೆ ಎಣ್ಣೆಗೆ 57 ರೂಪಾಯಿ ಇದೆ. ಅದೇ ರೀತಿ ನೇಪಾಳದಲ್ಲಿ 59 ರೂಪಾಯಿ ಇದೆ. ಭಾರತದಲ್ಲಿ 32 ರೂಪಾಯಿ ಮಾತ್ರ ಅಂದ್ರು.

-masthmagaa.com

Contact Us for Advertisement

Leave a Reply