masthmagaa.com:
ಪಾಕಿಸ್ತಾನದಲ್ಲಿ ತೆಹ್ರೀಕ್ ಇ ಇನ್ಸಾಫ್ ಜಾರಿಗೆ ತಂದಿರೋ ಸಿಂಗಲ್ ನ್ಯಾಷನಲ್ ಕರಿಕುಲಂ ಅಂದ್ರೆ ಏಕರಾಷ್ಟ್ರೀಯ ಪಠ್ಯಕ್ರಮ ಹೊಸ ವಿವಾದಕ್ಕೆ ಕಾರಣವಾಗಿದೆ. ಏಕ ರಾಷ್ಟ್ರೀಯ ಪಠ್ಯಕ್ರಮಕ್ಕಾಗಿ ಒಂದು ಸಮಿತಿ ರಚಿಸಲಾಗಿದೆ. ಪಠ್ಯದಲ್ಲಿ ಏನೇನ್ ಇರಬೇಕು.. ಏನೇನ್ ಇರಬಾರದು ಅನ್ನೋದನ್ನ ಅವರೇ ನಿರ್ಧರಿಸ್ತಾರೆ. ಆದ್ರೆ ಈ ಸಮಿತಿ ಸದಸ್ಯರನ್ನಾಗಿ ಧಾರ್ಮಿಕ ಮುಖಂಡರನ್ನು ನೇಮಕ ಮಾಡಲಾಗಿದೆ. ಆದ್ರೆ ಅವರು ಜೀವ ಶಾಸ್ತ್ರ ಪಾಠದಲ್ಲಿ ಬರೋ ಅಂಗಾಂಗದ ವಿವರಗಳನ್ನೊಳಗೋಂಡ ರೇಖಾಚಿತ್ರಗಳನ್ನು ಬಳಸಬಾರದು. ಇದು ಅಶ್ಲೀಲತೆಯ ಸಂಕೇತ ಅಂತ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಇಂಥಹ ಕಂಟೆಂಟ್ಗಳು ಮಕ್ಕಳ ಪಠ್ಯ ಕ್ರಮದಲ್ಲಿ ಇರಬಾರದು ಅಂತ ಪಠ್ಯ ಪುಸ್ತಕ ಪಬ್ಲಿಷರ್ಗಳಿಗೆ ಸೂಚಿಸಿದ್ದಾರಂತೆ.. ಆದ್ರೆ ಈ ರೀತಿಯ ರೇಖಾಚಿತ್ರಗಳಿಲ್ಲದೇ ಬಯಾಲಜಿ ಪಾಠ ಮಾಡೋದಾದ್ರೂ ಹೇಗೆ ಅನ್ನೋದು ಪ್ರಶ್ನೆ.. ಯಾಕಂದ್ರೆ ಜೈವಿಕ ವಿಕಾಸ, ಜೀರ್ಣಾಂಗ ವ್ಯವಸ್ಥೆ, ಸಂತಾನೋತ್ಪತ್ತಿ, ಮತ್ತು ಸಸ್ತನಿ ಗ್ರಂಥಿಯನ್ನು ವಿವರಿಸಲು ಈ ರೇಖಾಚಿತ್ರಗಳು ನಿರ್ಣಾಯಕವಾಗಿವೆ. ಕಳೆದ ಮಾರ್ಚ್ನಲ್ಲಿ ಪ್ರೈಮರಿ ಶಾಲೆಗೆ ಸಂಬಂಧಿಸಿದಂತೆ ಪ್ರಥಮ ಹಂತದ ಏಕರಾಷ್ಟ್ರೀಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇನ್ನು 6ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ 2ನೇ ಹಂತದ ಏಕರಾಷ್ಟ್ರೀಯ ಪಠ್ಯಕ್ರಮ ರೆಡಿಯಾಗ್ತಿದ್ದು, 2023ರಿಂದ ಅನ್ವಯವಾಗಲಿದೆ.
-masthmagaa.com
Contact Us for Advertisement